ಭಾರತೀಯ ಬಾಕ್ಸರ್ ಗಳ ಮಿಂಚಿನ ಪ್ರದರ್ಶನ

ಸರ್ಬಿಯಾದ ರುಮಾ ನಗರದಲ್ಲಿ ನಡೆಯುತ್ತಿರುವ 5ನೇ ಎಐಬಿಎ ನೇಷನ್ಸ್ ಪಕ್ ಪಂದ್ಯಾವಳಿಯಲ್ಲಿ ಭಾರತೀಯ ಮಹಿಳಾ ಬಾಕ್ಸರ್ ಗಳು ಉತ್ತಮ ಸಾಧನೆ ತೋರಿದ್ದಾರೆ...
ಬಾಕ್ಸರ್
ಬಾಕ್ಸರ್
Updated on

ನವದೆಹಲಿ: ಸರ್ಬಿಯಾದ ರುಮಾ ನಗರದಲ್ಲಿ ನಡೆಯುತ್ತಿರುವ 5ನೇ ಎಐಬಿಎ ನೇಷನ್ಸ್ ಪಕ್ ಪಂದ್ಯಾವಳಿಯಲ್ಲಿ ಭಾರತೀಯ ಮಹಿಳಾ ಬಾಕ್ಸರ್ ಗಳು ಉತ್ತಮ ಸಾಧನೆ ತೋರಿದ್ದಾರೆ.

ಹಿರಿಯರ, ಯುವ ಹಾಗೂ ಕಿರಿಯರ ವಿಭಾಗದ ಪಂದ್ಯಗಳಳ್ಲಿ ಭಾರತಕ್ಕೆ ಒಟ್ಟು 4 ಚಿನ್ನ, 9 ಬೆಳ್ಳಿ ಹಾಗೂ 9 ಕಂಚಿನ ಪದಕಗಳನ್ನು ಪಡೆದಿದ್ದಾರೆ.

ಹಿರಿಯರ ವಿಭಾಗದಲ್ಲಿ ಸೀಮಾ ಪೂನಿಯಾ (+81ಕೆಜಿ) ಹಾಗೂ ಪ್ವಿಲಾವೊ ಬಾಸುಮತಾರಿ (57 ಕೆಜಿ) ಚಿನ್ನ ಗೆದ್ದರೆ, ಕಿರಿಯರ ವಿಭಾಗದಲ್ಲಿ ಸೋನಿಯಾ (48 ಕೆಜಿ), ಮನಿಷಾ (60 ಕೆಜಿ) ಬಂಗಾರದ ಗೌರವಕ್ಕೆ ಭಾಜನದರು.

ಉಕ್ರೇ ನ್‍ನ ಇಲಿಝವೆಟಾ ಸುಯುಶ್ಕಿನಾ ವಿರುದಟಛಿ ಸೀಮಾ 30 ಅಂತರದಲ್ಲಿ ಜಯ ಸಾಝಿಸಿದರೆ, ಆಲ್ಜೀರಿಯಾದ ಮನೆಲ್ ಮೆಹಾರ್ಝಿ ವಿರುದಟಛಿ ಸೆಣಸಿದ ಬಾಸುಮತಾರಿ
30 ಅಂತರದಲ್ಲಿ ಜಯ ಸಾಧಿಸಿದರು. ಭಾರತಕ್ಕೆ ಬಂದ ಬೆಳ್ಳಿ ಪದ ಕಗಳಲ್ಲಿ ಹೆಚ್ಚಿನವು ಯುವ ಆಟಗಾರರ ವಿಭಾಗದಿಂದ ಬಂದಿವೆ. ಸರಿತಾ ಸಿಂಗ್ (57 ಕೆಜಿ), ಸಿವಿ ಬೂರಾ (60 ಕೆಜಿ) ಹಾಗೂ ನಿಶಾ (64 ಕೆಜಿ)ಯಲ್ಲಿ ರಜತ ಗೌರವ ಪಡೆದರೆ, ಕಿರಿಯರ ವಿಭಾಗದಲ್ಲಿ ರಮ್ಯಾ ಗುದುರು (48 ಕೆಜಿ), ಪರ್ವೀನ್ (52 ಕೆಜಿ), ಆಸ್ಥಾ ಪಾಹ್ವಾ (70 ಕೆಜಿ) ಹಾಗೂ ನಿಹಾರಿಕಾ ಗೋನೆಲ್ಲಾ (80 ಕೆಜಿ) ಬೆಳ್ಳಿ ಪದಕ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com