ಆಸ್ಟ್ರೇಲಿಯಾ ಓಪನ್: ಫೈನಲ್ ಗೆ ಲಗ್ಗೆಯಿಟ್ಟ ಸಾನಿಯಾ-ಹಿಂಗೀಸ್ ಜೋಡಿ

ವಿಶ್ವದ ನಂಬರ್ 1 ಟೆನ್ನಿಸ್ ಜೋಡಿ ಭಾರತದ ಖ್ಯಾತ ಸಾನಿಯಾ ಮಿರ್ಜಾ ಮತ್ತು ಸ್ವಿಜರ್ಲೆಂಡ್​ನ ಮಾರ್ಟಿನಾ ಹಿಂಗೀಸ್ ಜೋಡಿ ಆಸ್ಟ್ರೇಲಿಯನ್ ಓಪನ್ ಟೆನಿಸ್...
ಸಾನಿಯಾ ಮಿರ್ಜಾ, ಮಾರ್ಟಿನಾ ಹಿಂಗಿಸ್
ಸಾನಿಯಾ ಮಿರ್ಜಾ, ಮಾರ್ಟಿನಾ ಹಿಂಗಿಸ್

ಮೊಲ್ಬೋರ್ನ್: ವಿಶ್ವದ ನಂಬರ್ 1 ಟೆನ್ನಿಸ್ ಜೋಡಿ ಭಾರತದ ಖ್ಯಾತ ಸಾನಿಯಾ ಮಿರ್ಜಾ ಮತ್ತು ಸ್ವಿಜರ್ಲೆಂಡ್​ನ ಮಾರ್ಟಿನಾ ಹಿಂಗೀಸ್ ಜೋಡಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದಾರೆ.

13ನೇ ಶ್ರೇಯಾಂಕದ ಜೂಲಿಯಾ ಜಾರ್ಜಸ್ ಮತ್ತು ಕ್ಯಾರೊಲಿನಾ ಪ್ಲಿಸ್ಕೋವಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸಾನಿಯಾ ಜೋಡಿ ರೋಚಕ ಜಯ ದಾಖಲಿಸಿ 3ನೇ ಬಾರಿಗೆ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದಾರೆ.

ಸುಮಾರು 27 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಆರಂಭದಿಂದಲೂ ಮೇಲುಗೈ ಸಾಧಿಸಿದ ಈ ಜೋಡಿ ಜಾರ್ಜಸ್ ಮತ್ತು ಕ್ಯಾರೊಲಿನಾ ಪ್ಲಿಸ್ಕೋವಾ ಜೋಡಿಯನ್ನು 6-1, 6-0 ನೇರ ಸೆಟ್ ಗಳ ಅಂತರದಿಂದ ಸೋಲಿಸಿದ್ದಾರೆ.

ಆಸ್ಟ್ರೇಲಿಯಾ ಓಪನ್ ಫೈನಲ್ ಪಂದ್ಯದಲ್ಲಿ ಈ ಜೋಡಿ 7ನೇ ಶ್ರೇಯಾಂಕದ ಆಂಡ್ರಿಯಾ ಮತ್ತು ಲೂಸೀ ಹಾರ್ಡೇಕ್ಕ್ ಅವರನ್ನು ಎದುರಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com