ದಬಾಂಗ್ ಡೆಲ್ಲಿ ವಿರುದ್ಧ ಯು ಮುಂಬಾಗೆ ಅಮೋಘ ಜಯ

ಪ್ರೊ ಕಬಡ್ಡಿಯಲ್ಲಿ ಬಲಿಷ್ಠ ತಂಡವಾಗಿದ್ದ ಯು ಮುಂಬಾ ತಂಡ ಸತತ ಎರಡು ಪಂದ್ಯಗಳ ಸೋಲಿನ ನಂತರ ಚೇತರಿಸಿಕೊಂಡು ದಬಾಂಗ್ ಡೆಲ್ಲಿ ವಿರುದ್ಧ ಜಯ ಗಳಿಸಿದೆ...
ಯು ಮುಂಬಾ
ಯು ಮುಂಬಾ
Updated on

ಜೈಪುರ: ಪ್ರೊ ಕಬಡ್ಡಿಯಲ್ಲಿ ಬಲಿಷ್ಠ ತಂಡವಾಗಿದ್ದ ಯು ಮುಂಬಾ ತಂಡ ಸತತ ಎರಡು ಪಂದ್ಯಗಳ ಸೋಲಿನ ನಂತರ ಚೇತರಿಸಿಕೊಂಡು ದಬಾಂಗ್ ಡೆಲ್ಲಿ ವಿರುದ್ಧ ಜಯ ಗಳಿಸಿದೆ.

ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ದಬಾಂಗ್ ಡೆಲ್ಲಿ ವಿರುದ್ಧದ ಮೂರನೇ ಪಂದ್ಯದಲ್ಲಿ ಯು ಮುಂಬಾ 27-25 ಅಂಕಗಳಿಂದ ಗೆಲುವು ಸಾಧಿಸಿದೆ.

2 ಅಂಕಗಳ ಹಿನ್ನಡೆಯೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಮುಂಬೈ ತಂಡ 9 ನಿಮಿಷದಲ್ಲೇ ಮುನ್ನಡೆ ಪಡೆದುಕೊಂಡಿತು. 29ನೇ ನಿಮಿಷದಲ್ಲಿ ದಾಳಿಗಿಳಿದ ರಿಷಾಂಕ್ ದೇವಾಡಿಗ ಸೂಪರ್ ರೈಡ್ ಮೂಲಕ ಮೂವರನ್ನು ಔಟ್ ಮಾಡಿ ತಂಡ ಮುನ್ನಡೆ ಸಾಧಿಸಲು ನೆರವಾದರು.

ಪ್ರೊ ಕಬಡ್ಡಿ ಲೀಗ್ ನಲ್ಲಿ 7 ಬಾರಿ ಮುಖಾಮುಖಿಯಾಗಿರುವ ದಬಾಂಗ್ ಡೆಲ್ಲಿ ಮತ್ತು ಯು ಮುಂಬಾ ತಂಡಗಳಲ್ಲಿ ಮುಂಬೈ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com