ಬುಲ್ಸ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದ ಬೆಂಗಾಲ್ ವಾರಿಯರ್ಸ್

ಪ್ರೊ ಕಬಡ್ಡಿ 4ನೇ ಆವೃತ್ತಿಯ ಲೀಗ್ ನಿಂದ ಹೊರಬಿದ್ದಿರುವ ಬೆಂಗಳೂರು ಬುಲ್ಸ್ ತಂಡ ಬೆಂಗಾಲ್ ವಾರಿಯರ್ಸ್ ವಿರುದ್ಧ 27-25 ಅಂತರದಲ್ಲಿ ಜಯ ಸಾಧಿಸಿದೆ...
ಬೆಂಗಳೂರು ಬುಲ್ಸ್, ಬೆಂಗಾಲ್ ವಾರಿಯರ್ಸ್
ಬೆಂಗಳೂರು ಬುಲ್ಸ್, ಬೆಂಗಾಲ್ ವಾರಿಯರ್ಸ್

ಕೊಲ್ಕತ್ತಾ: ಪ್ರೊ ಕಬಡ್ಡಿ 4ನೇ ಆವೃತ್ತಿಯ ಲೀಗ್ ನಿಂದ ಹೊರಬಿದ್ದಿರುವ ಬೆಂಗಳೂರು ಬುಲ್ಸ್ ತಂಡ ಬೆಂಗಾಲ್ ವಾರಿಯರ್ಸ್ ವಿರುದ್ಧ 27-25 ಅಂತರದಲ್ಲಿ ಜಯ ಸಾಧಿಸಿದೆ.

ಕೋಲ್ಕತಾದಲ್ಲಿ ನಡೆದ ಪಂದ್ಯ ಬೆಂಗಾಲ್ ವಾರಿಯರ್ಸ್ ಗೆ ಪ್ರಮುಖ ಪಂದ್ಯವಾಗಿತ್ತು. ಈ ಪಂದ್ಯವನ್ನು ವಾರಿಯರ್ಸ್ ಗೆದ್ದಿದ್ದರೆ ಸೆಮಿಫೈನಲ್ ಪ್ರವೇಶಿಸುವ ಸಾಧ್ಯತೆ ಇತ್ತು. ಆದರೆ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ವಾರಿಯರ್ಸ್ ಸೋಲು ಕಂಡಿದೆ.

ಅಂತೂ ಟೂರ್ನಿಯಿಂದ ಎರಡು ತಂಡಗಳು ಅಧಿಕೃತವಾಗಿ ಹೊರಬಿದ್ದಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com