ಪ್ರೊ ಕಬಡ್ಡಿ ಫೈನಲ್ಗೆ ಜೈಪುರ ಪ್ಯಾಂಥರ್ಸ್-ಪಾಟ್ನಾ ಪೈರೇಟ್ಸ್

ಪ್ರೊ ಕಬಡ್ಡಿ 4ನೇ ಆವೃತ್ತಿಯ ಫೈನಲ್ ನಲ್ಲಿ ಪಾಟ್ನಾ ಪೈರೇಟ್ಸ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ಮುಖಾಮುಖಿಯಾಗಲಿವೆ...
ಜೈಪುರ ಪಿಂಕ್ ಪ್ಯಾಂಥರ್ಸ್, ಪಾಟ್ನಾ ಪೈರೇಟ್ಸ್
ಜೈಪುರ ಪಿಂಕ್ ಪ್ಯಾಂಥರ್ಸ್, ಪಾಟ್ನಾ ಪೈರೇಟ್ಸ್

ಹೈದರಾಬಾದ್: ಪ್ರೊ ಕಬಡ್ಡಿ 4ನೇ ಆವೃತ್ತಿಯ ಫೈನಲ್ ನಲ್ಲಿ ಪಾಟ್ನಾ ಪೈರೇಟ್ಸ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ಮುಖಾಮುಖಿಯಾಗಲಿವೆ.

ಕಳೆದ ಭಾರಿ ಫೈನಲ್ ಪ್ರವೇಶಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಪಾಟ್ನಾ ಪೈರೇಟ್ಸ್ ಮತ್ತೆ 2ನೇ ಭಾರಿಗೆ ಫೈನಲ್ ಗೇರಿದೆ. ಇನ್ನು ಜೈಪುರ ಪಿಂಕ್ ಪ್ಯಾಂಥರ್ಸ್ ಸಹ ಎರಡನೇ ಭಾರಿಗೆ ಫೈನಲ್ ಪ್ರವೇಶಿಸಿದ್ದು ಪ್ರಶಸ್ತಿಗಾಗಿ ಉಭಯ ತಂಡಗಳು ಜಿದ್ದಾ ಜಿದ್ದಿನ ಕಾದಾಟ ನಡೆಸಲಿವೆ.

ಪುನೇರಿ ಪಲ್ಟಾನ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ 37-33 ಅಂಕಗಳಿಂದ ಮಣಿಸಿ ಫೈನಲ್ ಗೇರಿದರೆ. 2ನೇ ಸೆಮಿಫೈನಲ್ ನಲ್ಲಿ ತೆಲುಗು ಟೈಟಾನ್ಸ್ ಅನ್ನು 24-34 ಅಂಕಗಳ ಅಂತರದಿಂದ ಸೋಲಿಸಿ ಜೈಪುರ ಪಿಂಕ್ ಪ್ಯಾಂಥರ್ಸ್ ಫೈನಲ್ ಗೇರಿದೆ.
 
ಜುಲೈ 31ರಂದು ಹೈದರಾಬಾದ್ ನ ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದ್ದು, 8 ಗಂಟೆಗೆ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರ ಪ್ರಸಾರವಾಗಲಿದೆ.

ಪ್ರೊ ಕಬಡ್ಡಿ ಲೀಗ್ ಚಾಂಪಿಯನ್ಸ್ ಪಟ್ಟಿ
2014ರ ಸೀಸನ್-1 ರಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್
2015ರ ಸೀಸನ್-2 ರಲ್ಲಿ ಯು ಮುಂಬಾ
2016ರ ಸೀಸನ್- 3 ರಲ್ಲಿ ಪಾಟ್ನಾ ಪೈರೇಟ್ಸ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com