ಮ್ಯಾಡ್ರಿಡ್ ಓಪನ್: ಸೆಮಿ ಫೈನಲ್ ಗೆ ಸಾನಿಯಾ-ಹಿಂಗಿಸ್ ಜೋಡಿ

ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ವಿಶ್ವ ನಂ. 1 ಜೋಡಿ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ...
ಸಾನಿಯಾ-ಹಿಂಗಿಸ್
ಸಾನಿಯಾ-ಹಿಂಗಿಸ್
ಮ್ಯಾಡ್ರಿಡ್: ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ವಿಶ್ವ ನಂ. 1 ಜೋಡಿ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಸೆಮಿ ಫೈನಲ್ ಪ್ರವೇಶಿಸಿದ್ದಾರೆ.
ಮುಂಬರುವ ಫ್ರೆಂಚ್ ಓಪನ್ ಸಿದ್ಧತೆ ದೃಷ್ಟಿಯಿಂದ ಮಹತ್ವದ್ದಾದ ಕ್ಲೇ-ಕೋರ್ಟ್ ಟೂರ್ನಿಯಲ್ಲಿ ಸಾನಿಯಾ-ಹಿಂಗಿಸ್ ಜೋಡಿ ಅಮೆರಿಕ-ರಷ್ಯಾ ಜೋಡಿಯನ್ನು 6-2, 6-0 ನೇರಸೆಟ್​ಗಳಿಂದ ಮಣಿಸಿತು.
ಮಹಿಳಾ ಡಬಲ್ಸ್ ವಿಭಾಗದಲ್ಲಿ ಅಮೆರಿಕದ ವನಿಯಾ ಕಿಂಗ್ ಹಾಗೂ ರಷ್ಯಾದ ಅಲ್ಲಾ ಜೋಡಿಯ ವಿರುದ್ಧ ಜಯ ಸಾಧಿಸಿದ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್  ಸೆಮಿ ಫೈನಲ್ ಪ್ರವೇಶಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com