

ಅಹಮದಾಬಾದ್: ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಎದುರಾಳಿ ತಂಡ ಅರ್ಜೆಂಟೀನಾವನ್ನು ಭಾರಿ ಅಂಕಗಳಿಂದ ಮಣಿಸಿದೆ.
ಟ್ರಾನ್ಸ್ ಸ್ಟೇಡಿಯಾದ ದಿ ಅರೆನಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬರೋಬ್ಬರಿ 54 ಅಂಕಗಳ ಅಂತರದಿಂದ ಮಣಿಸಿ ದಾಖಲೆ ಮಾಡಿದೆ. ಭಾರತ ತಂಡ ಇದೇ ಮೊದಲ ಭಾರಿಗೆ ಟೂರ್ನಿಯಲ್ಲಿ 74 ಅಂಕಗಳನ್ನು ಗಳಿಸಿದ ಸಾಧನೆಯನ್ನು ಮಾಡಿದೆ. ಇದಕ್ಕೂ ಮುನ್ನ ಪೋಲೆಂಡ್ ತಂಡ ಅಮೆರಿಕ ವಿರುದ್ಧ 75 ಅಂಕ ಕಲೆ ಹಾಕಿ ಗರಿಷ್ಠ ಅಂಕ ಕಲೆ ಹಾಕಿದ ಮೊದಲ ತಂಡವಾಗಿದೆ.
ಅರ್ಜೆಂಟೀನಾ ವಿರುದ್ಧ ಗೆಲ್ಲುವ ಮೂಲಕ ಟೂರ್ನಿಯ ಸೆಮಿಫೈನಲ್ ಹಂತಕ್ಕೆ ಭಾರತ ಸನಿಹವಾಗಿದ್ದು, ಇಂಗ್ಲೆಂಡ್ ತಂಡ ತನ್ನ ಮುಂದಿನ ಯಾವುದೇ ಪಂದ್ಯದಲ್ಲಿ ಸೋತರೂ ಭಾರತದ ಸ್ಥಾನ ಖಚಿತಗೊಳ್ಳಲಿದೆ.
Advertisement