ದುಲೀಪ್ ಟ್ರೋಫಿ ಗೆದ್ದ ಇಂಡಿಯಾ ಬ್ಲ್ಯೂ

ದುಲೀಪ್ ಟ್ರೋಫಿ ಕ್ರಿಕೆಟ್ ಕೂಟದಲ್ಲಿ ಇಂಡಿಯಾ ರೆಡ್ ತಂಡದ ವಿರುದ್ಧ ಗೆದ್ದು ಇಂಡಿಯಾ ಬ್ಲ್ಯೂ ಚಾಂಪಿಯನ್ ಆಗಿದೆ...
ಇಂಡಿಯಾ ಬ್ಲ್ಯೂ
ಇಂಡಿಯಾ ಬ್ಲ್ಯೂ
ಗ್ರೇಟರ್ ನೋಯ್ಡಾ: ದುಲೀಪ್ ಟ್ರೋಫಿ ಕ್ರಿಕೆಟ್ ಕೂಟದಲ್ಲಿ ಇಂಡಿಯಾ ರೆಡ್ ತಂಡದ ವಿರುದ್ಧ ಗೆದ್ದು ಇಂಡಿಯಾ ಬ್ಲ್ಯೂ ಚಾಂಪಿಯನ್ ಆಗಿದೆ. 
ಹೊನಲು ಬೆಳಕು ಮತ್ತು ಗುಲಾಬಿ ಚೆಂಡಿನಲ್ಲಿ ಮೊದಲ ಬಾರಿಗೆ ಆಡಿದ ಟೂರ್ನಿಯಲ್ಲಿ ಇಂಡಿಯಾ ಬ್ಲ್ಯೂ ತಂಡವು ಫೈನಲ್ ನಲ್ಲಿ 355 ರನ್ ಗಳಿಂದ ಇಂಡಿಯಾ ರೆಡ್ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು. 
ಫೈನಲ್ ಹೋರಾಟದಲ್ಲಿ ಇಂಡಿಯಾ ರೆಡ್ ಗೆ ಗೆಲ್ಲಲ್ಲು 517 ರನ್ ಗಳ ಬೃಹತ್ ಸವಾಲಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಯುವರಾಜ್ ಸಿಂಗ್ ನೇತೃತ್ವದ ರೆಡ್ ತಂಡ ರವೀಂದ್ರ ಜಡೇಜಾ ದಾಳಿಗೆ ತತ್ತರಿಸಿ ಕೇವಲ 161 ರನ್ ಗಳಿಗೆ ಆಲೌಟ್ ಆಗಿ ಸೋಲು ಒಪ್ಪಿಕೊಂಡಿತು. 
ಮೊದಲ ಇನಿಂಗ್ಸ್ ನಲ್ಲಿ ಐದು ವಿಕೆಟ್ ಪಡೆದಿದ್ದ ರವೀಂದ್ರ ಜಡೇಜಾ ರೆಡ್ ನ ದ್ವಿತೀಯ ಇನ್ನಿಂಗ್ಸ್ ನಲ್ಲೂ ಐದು ವಿಕೆಟ್ ಕಿತ್ತು ಇಂಡಿಯಾ ಬ್ಲ್ಯೂ ತಂಡಕ್ಕೆ ಜಯ ತಂದುಕೊಟ್ಟರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com