

ಕರಾಚಿ: ಉರಿ ಸೇನಾ ಶಿಬಿರದ ಮೇಲಿನ ಉಗ್ರ ದಾಳಿ ಬಳಿಕ ಭಾರತ-ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿದ್ದು ಇದರ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಪಾಕ್ ನೊಂದಿಗೆ ಕ್ರಿಕೆಟ್ ಆಡುವ ಪ್ರಶ್ನೆಯೇ ಇಲ್ಲ ಎಂದಿದ್ದು ಇದಕ್ಕೆ ಪಾಕಿಸ್ತಾನ ಮಾಜಿ ಕ್ರಿಕೆಟಿಗರು ಅಪಹಾಸ್ಯ ಮಾಡಿದ್ದಾರೆ.
ಕಳೆದ ಎಂಟು ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಪಂದ್ಯಗಳೇ ನಡೆದಿಲ್ಲ ಹೀಗಿರುವಾಗ ಪಾಕ್ ನೊಂದಿಗೆ ಆಡುವುದಿಲ್ಲ ಎಂಬ ಹೇಳಿಕೆ ಹಾಸ್ಯಭರಿತವಾಗಿದೆ ಎಂದು ಮಾಜಿ ಪಾಕ್ ನಾಯಕ ಮುಹಮ್ಮದ್ ಯೂಸುಫ್ ಹೇಳಿದ್ದಾರೆ.
ಅನುರಾಗ್ ಠಾಕೂರ್ ಹೇಳಿಕೆ ಕುರಿತಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಆದರೆ ಮಾಜಿ ಕ್ರಿಕೆಟಿಗರು ಮಾತ್ರ ಬಾಯಿ ಬಡಿದುಕೊಳ್ಳುತ್ತಿದ್ದಾರೆ.