ಫಾರ್ಮುಲಾ ಇ ಕಾರು ಚಾಲನೆ ಮಾಡಿದ ಮೊದಲ ಭಾರತೀಯ ಮಹಿಳೆ!

ಫಾರ್ಮುಲಾ ಇ ರೇಸಿಂಗ್ ಕಾರು ಚಲಾಯಿಸಿದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿಗೆ ಬಾಲಿವುಡ್ ನಟಿ ಗುಲ್ ಪನಾಗ್ ಪಾತ್ರರಾಗಿದ್ದಾರೆ.
ಫಾರ್ಮುಲಾ ಇ ರೇಸಿಂಗ್ ಕಾರಿನೊಂದಿಗೆ ನಟಿ ಗುಲ್ ಪನಾಗ್
ಫಾರ್ಮುಲಾ ಇ ರೇಸಿಂಗ್ ಕಾರಿನೊಂದಿಗೆ ನಟಿ ಗುಲ್ ಪನಾಗ್

ಬಾರ್ಸಿಲೋನಾ: ಫಾರ್ಮುಲಾ ಇ ರೇಸಿಂಗ್ ಕಾರು ಚಲಾಯಿಸಿದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿಗೆ ಬಾಲಿವುಡ್ ನಟಿ  ಗುಲ್ ಪನಾಗ್ ಪಾತ್ರರಾಗಿದ್ದಾರೆ.

ಫಾರ್ಮುಲಾ ವನ್  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟಿ ಗುಲ್ ಪನಾಗ್ ಸ್ಪೇನ್ ನ ಬಾರ್ಸಿಲೋನಾದಲ್ಲಿ ನಡೆದ ಸರ್ಕ್ಯೂಟ್ ನಲ್ಲಿ ರೇಸಿಂಗ್ ಕಾರನ್ನು ಚಾಲನೆ ಮಾಡಿದ್ದಾರೆ. ಈ ಮೂಲಕ ಇ ರೇಸಿಂಗ್ ಕಾರು ಓಡಿಸಿದ  ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಗುಲ್ ಪನಾಗ್ ಪಾತ್ರರಾಗಿದ್ದಾರೆ. ಎಂ 4 ಎಲಕ್ಟ್ರೋ  ಕಾರನ್ನು ಓಡಿಸಿದ ಗುಲ್ ಪನಾಗ್ ಫಾರ್ಮುಲಾ ರೇಸಿಂಗ್ ಈ ವೆಂಟ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.

 ಎಂ 4 ಎಲಕ್ಟ್ರೋ ಕಾರು ಮಹೇಂದ್ರ ನಾಲ್ಕನೇ ತಲೆಮಾರಿಗೆ ಸೇರಿದ ಕಾರಾಗಿದ್ದು, ಈ ರೇಸ್ ಕಾರನ್ನು ಓಡಿಸಿದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಗುಲ್ ಪನಾಗ್ ಒಬ್ಬರಾಗಿದ್ದಾರೆ. ತಮ್ಮ ಈ ಸಾಧನೆಗೆ ಗುಲ್ ಪನಾಗ್ ಸಂತಸ  ವ್ಯಕ್ತಪಡಿಸಿದ್ದಾರೆ.

ಬಾಲಿವುಡ್ ನಟಿ ಕೂಡ ಆಗಿರುವ ಗುಲ್ ಪನಾಗ್, ಕೆಲ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.  ನಾನಾ ಪಾಟೇಕರ್ ನಟಿಸಿದ ಅಬ್ ತಕ್ ಚಪ್ಪನ್ ಚಿತ್ರದಲ್ಲಿ ಗುಲ್ ಪನಾಗ್ ಗಮನ ಸೆಳೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com