ಸೋಲಿಲ್ಲದ ಸರದಾರ! ವಿಜೇಂದರ್ ಹೊಡೆತಕ್ಕೆ ಚೀನಾದ ಬಾಕ್ಸರ್ ತತ್ತರ

ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಚೀನಾದ ಬಾಕ್ಸರ್ ಜುಲ್ಪಿಕರ್ ಮೈಮಯ್ತ್ ಅಲಿಯನ್ನು ಸೋಲಿಸಿ ವೃತ್ತಿಪರ ಬಾಕ್ಸಿಂಗ್ ನಲ್ಲಿ ಸತತ 9ನೇ ಗೆಲುವು ಪಡೆದಿದ್ದಾರೆ...
ವಿಜೇಂದರ್ ಸಿಂಗ್
ವಿಜೇಂದರ್ ಸಿಂಗ್
ಮುಂಬೈ: ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಚೀನಾದ ಬಾಕ್ಸರ್ ಜುಲ್ಫಿಕರ್ ಮೈಮಯ್ತ್ ಅಲಿಯನ್ನು ಸೋಲಿಸಿ ವೃತ್ತಿಪರ ಬಾಕ್ಸಿಂಗ್ ನಲ್ಲಿ ಸತತ 9ನೇ ಗೆಲುವು ಪಡೆದಿದ್ದಾರೆ. 
ನಿನ್ನೆ ನಡೆದ ಡಬಲ್ ಬೆಲ್ಟ್ ಫೈಟ್ ನಲ್ಲಿ ವಿಜೇಂದರ್ ಮತ್ತು ಜುಲ್ಫಿಕರ್ ನಡುವೆ ಪಂದ್ಯ ನಡೆಯಿತು. ಏಟಿಗೆ ಎದಿರೇಟು ಎಂಬಂತೆ ಕೊನೇ ಹತ್ತು ಸುತ್ತುಗಳವರೆಗೆ ನಡೆದ ರೋಚಕ ಬಾಕ್ಸಿಂಗ್ ಫೈಟ್ ನಲ್ಲಿ ವಿಜೇಂದರ್ ಗೆದ್ದು ಏಷ್ಯನ್ ಕಿಂಗ್ ಆಗಿ ಹೊರಹೊಮ್ಮಿದ್ದಾರೆ. 
31 ವರ್ಷದ ವಿಜೇಂದರ್ ಸಿಂಗ್ ಪಂದ್ಯದಲ್ಲಿ 96-93, 95-94, 95-94ರಿಂದ ಮೈಮಯ್ತ್ ರನ್ನು ಸೋಲಿಸಿ ಸೂಪರ್ ಮಿಡಲ್ ವೈಟ್ ವಿಭಾಗದಲ್ಲಿ ಏಷ್ಯಾ ಕಿಂಗ್ ಎನಿಸಿಕೊಂಡರು. 
ವಿಜೇಂದರ್ ಸಿಂಗ್ ಇಲ್ಲಿಯವರೆಗೂ ಆಡಿದ ಪಂದ್ಯಗಳಲ್ಲಿ ಇದು ರೋಚಕ ಪಂದ್ಯವಾಗಿತ್ತು. ವಿಜೇಂದರ್ ಆಡಿದ 9 ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಸೋಲಿಲ್ಲದ ಸರದಾರನಾಗಿ ಹೊರಹೊಮ್ಮಿದ್ದಾರೆ. ಇನ್ನು 23 ವರ್ಷದ ಜುಲ್ಫಿಕರ್ ಸಹ ಆಡಿದ್ದ 8 ಪಂದ್ಯಗಳಲ್ಲಿ 7 ಗೆಲುವು, 1 ಡ್ರಾದೊಂದಿಗೆ ಅಜೇಯರಾಗಿ ಉಳಿದಿದ್ದು ಇದು ಅವರ ವೃತ್ತಿಜೀವನದ ಮೊದಲ ಸೋಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com