ದುಬೈ ವಿಶ್ವ ಸೂಪರ್‌ ಸೀರಿಸ್‌: ಫೈನಲ್ ಸುತ್ತು ಪ್ರವೇಶಿಸಿದ ಪಿ.ವಿ. ಸಿಂಧು

ದುಬೈ ವಿಶ್ವ ಸೂಪರ್‌ ಸೀರಿಸ್‌ ಫೈನಲ್ಸ್‌ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಹೆಮ್ಮೆಯ ಪಿ.ವಿ. ಸಿಂಧು ಫೈನಲ್‌ಗೆ ಪ್ರವೇಶಿಸಿದ್ದಾರೆ.
ಪಿ.ವಿ ಸಿಂಧು
ಪಿ.ವಿ ಸಿಂಧು
ದುಬೈ: ದುಬೈ ವಿಶ್ವ ಸೂಪರ್‌ ಸೀರಿಸ್‌ ಫೈನಲ್ಸ್‌ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಹೆಮ್ಮೆಯ ಪಿ.ವಿ. ಸಿಂಧು ಫೈನಲ್‌ಗೆ ಪ್ರವೇಶಿಸಿದ್ದಾರೆ. 
ಶನಿವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಚೀನಾದ ಚೆನ್‌ ಯೂಫಿ ಅವರ ವಿರುದ್ಧ 21–15, 21–18ರ ನೇರ ಸೆಟ್ ಗಳಿಂದ ಸೋಲಿಸಿದರು.  ಒಟ್ಟು 58 ನಿಮಿಷದ ಹೋರಾಟದಲ್ಲಿ ಸಿಂಧು ತಮ್ಮ ಗೆಲುವಿನ ಹಾದಿ ತಲುಪಿದ್ದರು
ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತದ ಆಟಗಾರ್ತಿ ಸಿಂದು ಸರಣಿಯ ಎಲ್ಲಾ ಪಂದ್ಯಗಳಲ್ಲಿಯೂ ವಿಜಯ ಸಾಧಿಸಿದ್ದು ಇಂದು (ಭಾನುವಾರ) ನಡೆಯುವ ಫೈನಲ್ಸ್ ನಲ್ಲಿ ಜಪಾನ್‌ನ ಆಟಗಾರ್ತಿ  ಅಕಾನೆ ಯಮಗುಚಿ ಅವರನ್ನು ಎದುರಿಸಲಿದ್ದಾರೆ.
ಶನಿವಾರ ನಡೆದ ಇನ್ನೊಂದು ಪಂದ್ಯದಲ್ಲಿ  ಜಪಾನ್‌ನ ಆಟಗಾರ್ತಿ ಅಕಾನೆ ಯಮಗುಚಿ ಗೆಲುವು ಸಾಧಿಸಿದ್ದಾರೆ. ಥಾಯ್ಲೆಂಡ್‌ನ ರಚನೊಕ್‌ ಇಂಟನಾನ್‌ ಅವರನ್ನು 17–21, 21–12, 21–19 ಸೆಟ್ ಗಳಿಂದ ಮಣಿಸಿದ ಯಮಗುಚಿ ಜಯದ ನಗು ಬೀರಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com