ಹಾಕಿ: ಉಗ್ರ ದಾಳಿ ಖಂಡಿಸಿ ಕಪ್ಪು ಪಟ್ಟಿ ಧರಿಸಿ ಅಟವಾಡಿದ ಭಾರತ ತಂಡ!

ಲಂಡನ್: ಪಾಕಿಸ್ತಾನದ ತಂಡದ ವಿರುದ್ಧ ಭರ್ಜರಿ ಗೆಲುವ ಸಾಧಿಸುವ ಮೂಲಕ ದೇಶಗ ಗೌರವ ಕಾಪಾಡಿದ ಭಾರತ ಹಾಕಿ ತಂಡ, ಪಾಕಿಸ್ತಾನಕ್ಕೆ ತನ್ನ ತಪ್ಪಿನ ಅರಿವು ಮೂಡಿಸುವ ಕೆಲಸವನ್ನೂ ಕೂಡ ಮಾಡಿ ಶ್ಲಾಘನೆಗೆ ಪಾತ್ರವಾಗಿದೆ.
ಹೌದು..ಭಾರತದ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ನಿರಂತರ ಉಗ್ರ ದಾಳಿಯನ್ನು ಖಂಡಿಸಿರುವ ಭಾರತ ಹಾಕಿ ತಂಡ ನಿನ್ನೆ ಲಂಡನ್ ನಲ್ಲಿ ವಿಶ್ವಹಾಕಿ ಚಾಂಪಿಯನ್ ಷಿಪ್ ಟೂರ್ನಿ ವೇಳೆ ಕಪ್ಪು ಪಟ್ಟಿ ಧರಿಸಿ ಆಟವಾಡುವ ಮೂಲಕ ಉಗ್ರ ದಾಳಿಯನ್ನು ಖಂಡಿಸಿದೆ. ಅಲ್ಲದೆ ಭಾರತೀಯ ಹುತಾತ್ಮ ಯೋಧರಿಗೆ ಈ ಮೂಲಕ ಗೌರವ ಸಲ್ಲಿಕೆ ಮಾಡಿದೆ. ಭಾರತ ತಂಡದ ಈ ನಡೆ ಅತ್ತ ಪಾಕಿಸ್ತಾನಕ್ಕೆ ಮುಜುಗರ ಉಂಟು ಮಾಡಿದ್ದು, ಮಾತ್ರವಲ್ಲದೇ ಗಡಿಯಾಚೆಗೆ ಅ ದೇಶ ನಡೆಸುತ್ತಿರುವ ಉಗ್ರ ದಾಳಿ ಕುರಿತಂತೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡಿದೆ.
ಭಾರತ ಹಾಕಿ ತಂಡದ ಈ ನಡೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದ್ದು, ತಂಡದ ಕೆಲಸಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


