ವಿಶ್ವ ಹಾಕಿ ಲೀಗ್: ಆರನೇ ಸ್ಥಾನಕ್ಕೆ ತೃಪ್ತಿ ಪಟ್ಟ ಭಾರತ!

ಪಾಕಿಸ್ತಾನವನ್ನು ಮಣಿಸಿ 5ನೇ ಸ್ಥಾನಕ್ಕೆ ಬರುವ ವಿಶ್ವಾಸ ಮೂಡಿಸಿದ್ದ ಭಾರತ ಹಾಕಿ ತಂಡ ಕೆನಾಡ ವಿರುದ್ಧ ಸೋಲುವ ಮೂಲಕ 6ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಂಡನ್: ಪಾಕಿಸ್ತಾನವನ್ನು ಮಣಿಸಿ 5ನೇ ಸ್ಥಾನಕ್ಕೆ ಬರುವ ವಿಶ್ವಾಸ ಮೂಡಿಸಿದ್ದ ಭಾರತ ಹಾಕಿ ತಂಡ ಕೆನಾಡ ವಿರುದ್ಧ ಸೋಲುವ ಮೂಲಕ 6ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

ನಿನ್ನೆ ಲಂಡನ್ ನಲ್ಲಿ ನಡೆದ ವಿಶ್ವ ಹಾಕಿ ಲೀಗ್ ಟೂರ್ನಿಯ ತನ್ನ ಕೊನೆಯ ಪಂದ್ಯದಲ್ಲಿ ಕೆನಡಾ ತಂಡದ ವಿರುದ್ಧ ಭಾರತ 2-3 ಅಂತರದಲ್ಲಿ ಸೋತಿದ್ದು, ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಕೆನಡಾದ ಪರ ಗೊರ್ಡನ್  ಜಾನ್‌ಸ್ಟನ್(3,44ನೇ ನಿಮಿಷ) ಹಾಗೂ ಕೆಗಾನ್ ಪೆರೇರ(40ನೇ ನಿಮಿಷ) ಗೋಲು ಬಾರಿಸಿದರು. ಕೆನಡಾದ ಗೋಲ್‌ ಕೀಪರ್ ಆ್ಯಂಟೊನಿ ಕಿಂಡ್ಲ್ ವೀರೋಚಿತ ಪ್ರದರ್ಶನದಿಂದ ಭಾರತಕ್ಕೆ ಹಲವು ಬಾರಿ ಗೋಲು ಬರವುದನ್ನು  ತಪ್ಪಿಸಿದರು.

ಭಾರತದ ಪರ ಹರ್ಮನ್‌ಪ್ರೀತ್ ಸಿಂಗ್(7ನೇ ಹಾಗೂ 22ನೇ ನಿಮಿಷ) ಅವಳಿ ಗೋಲು ಬಾರಿಸಿದರು. ಭಾನುವಾರ ನಡೆದ ಪಂದ್ಯದಲ್ಲಿ ಭಾರತ ಸೋತಿತಾದರೂ, ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಪುರುಷರ ಹಾಕಿ  ವಿಶ್ವಕಪ್‌ ಗೆ ಅರ್ಹತೆ ಪಡೆದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com