ಉದ್ರೇಕಿತ ಉಡುಗೆ ತೊಟ್ಟಿದ್ದಾಳೆಂದು ಬಾಲಕಿಯನ್ನು ಚೆಸ್ ಕೂಟದಿಂದ ಹೊರ ಹಾಕಿದರು!

ಮಲೇಷ್ಯಾದಲ್ಲಿ ನಡೆದ ರಾಷ್ಟ್ರೀಯ ಶಾಲಾ ಚೆಸ್ ಚಾಂಪಿಯನ್ ಶಿಪ್ ನಲ್ಲಿ ವಿಚಿತ್ರ ಪ್ರಸಂಗವೊಂದು ನಡೆದಿದ್ದು ಉದ್ರೇಕಿತ ಉಡುಗೆ ತೊಟ್ಟಿದ್ದ 12 ವರ್ಷದ...
ಉದ್ರೇಕಿತ ಉಡುಗೆ ತೊಟ್ಟಿದ್ದಾಳೆಂದು ಬಾಲಕಿಯನ್ನು ಚೆಸ್ ಕೂಟದಿಂದ ಹೊರ ಹಾಕಿದರು!
ಕೌಲಾಲಂಪುರ: ಮಲೇಷ್ಯಾದಲ್ಲಿ ನಡೆದ ರಾಷ್ಟ್ರೀಯ ಶಾಲಾ ಚೆಸ್ ಚಾಂಪಿಯನ್ ಶಿಪ್ ನಲ್ಲಿ ವಿಚಿತ್ರ ಪ್ರಸಂಗವೊಂದು ನಡೆದಿದ್ದು ಉದ್ರೇಕಿತ ಉಡುಗೆ ತೊಟ್ಟಿದ್ದ 12 ವರ್ಷದ ಬಾಲಕಿಯನ್ನು ಕೂಟದಿಂದ ಬಲವಂತವಾಗಿ ಹೊರಹಾಕಿದ್ದಾರೆ. 
ಏಪ್ರಿಲ್ 14ರಿಂದ 16ರವರೆಗೆ ಚೆಸ್ ಚಾಂಪಿಯನ್ ಶಿಪ್ ಟೂರ್ನಿ ನಡೆದಿತ್ತು. ಬಾಲಕಿ ಸಾಂಪ್ರದಾಯಿಕ ಉಡುಗೆ ಧರಿಸಿಲ್ಲ, ಮಂಡಿಯವರೆಗೆ ಮಾತ್ರ ಲಂಗ ಧರಿಸಿದ್ದಾಳೆಂಬ ಕಾರಣ ನೀಡಿ ಸಂಘಟಕರು ಈ ಕೃತ್ಯ ಎಸಗಿದ್ದಾರೆ ಎಂದು ಆಕೆಯ ಕೋಚ್ ಕೌಶಲ್ ಖಂಡರ್ ಪೊಲೀಸ್ ದೂರು ನೀಡಿದ್ದಾರೆ. 
ಲೈಂಗಿಕ ಭಾವನೆಗಳನ್ನು ಉತ್ತೇಜಿಸುವಂತಾ ಉಡುಗೆಯನ್ನು ಬಾಲಕಿ ತೊಟ್ಟಿದ್ದಾಳೆ ಎಂದು ಕೂಟದ ನಿರ್ದೇಶಕರು ಸೂಚನೆ ನೀಡಿದ್ದು ಹೊರ ಹೋಗಲು ತಿಳಿಸಿದ್ದಾರೆ. ವಾದ ವಿವಾದದ ನಂತರ ಸಂಘಟಕರು ಮೈ ಮುಚ್ಚುವಂತಹ ಬಟ್ಟೆ ಧರಿಸಿ ಮರುದಿನ ಬಂದು ಪಂದ್ಯ ಆಡುವಂತೆ ಸೂಚಿಸಿದ್ದಾರೆ. ಆದರೆ ಆಗಲೇ ರಾತ್ರಿ ಆಗಿದ್ದರಿಂದ ಬಟ್ಟೆ ಅಂಗಡಿಗಳು ತೆರೆದಿರಲಿಲ್ಲ. ಇನ್ನು ಮರುದಿನ ಬೆಳಗ್ಗೆ 9 ಗಂಟೆಗೂ ಬಟ್ಟೆ ಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ ಕೂಟದಿಂದಲೇ ಹೊರಹೋಗುವಂತಾಯಿತು. 
ಈ ಘಟನೆಯಿಂದ ಪ್ರತಿಭಾವಂತ ಆಟಗಾರ್ತಿಗೆ ತೊಂದರೆಯಾಗಿದೆ. ಇದಕ್ಕಾಗಿ ಆಕೆಯ ವ್ಯಯಿಸಿದ ಹಣ, ಶ್ರಮ, ಸಮಯ ಎಲ್ಲವೂ ವ್ಯರ್ಥವಾಗಿದೆ ಎಂದು ಕೋಚ್ ದೂರಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com