ಒಪ್ಪಂದದ ಪ್ರಕಾರ ಪಾಕಿಸ್ತಾನ 6ರಲ್ಲಿ ನಾಲ್ಕು ಸರಣಿಗಳನ್ನು ಆಯೋಜಿಸಬೇಕಿದೆ. ಈ ಬೆಳವಣಿಗೆಗೆ ಸಂಬಂಧಪಟ್ಟಂತೆ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಬಿಸಿಸಿಐ ವಿರುದ್ಧ ಐಸಿಸಿ ವಿವಾದ ಬಗೆಹರಿಸುವ ಸಮಿತಿ ಮುಂದೆ ಕೇಸು ದಾಖಲಿಸದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮನವೊಲಿಸಲು ನಡೆಯುವ ಸಭೆಯಲ್ಲಿ ಐಸಿಸಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡೇವ್ ರಿಚರ್ಡ್ಸನ್ ಭಾಗವಹಿಸಲಿದ್ದಾರೆ.