ಕಾಮನ್‌ವೆಲ್ತ್ ಕ್ರೀಡಾಕೂಟ: ಪುರುಷರ ಹಾಕಿಯಲ್ಲಿ ನ್ಯೂಜಿಲೆಂಡ್ ಗೆ ಮಣಿದ ಭಾರತ

21ನೇ ಆವೃತ್ತಿಯ ಕಾಮನ್‌ವೆಲ್ತ್ ಕ್ರೀಡಾಕೂಟದ ಪುರುಷರ ಹಾಕಿ ವಿಭಾಗದಲ್ಲಿ ಭಾರತ ತಂಡ ಸೆಮೀಸ್ ಹಂತದಲ್ಲಿ ಸೋಲನುಭವಿಸಿದೆ.
ಕಾಮನ್‌ವೆಲ್ತ್ ಕ್ರೀಡಾಕೂಟ: ಪುರುಷರ ಹಾಕಿಯಲ್ಲಿ ನ್ಯೂಜಿಲೆಂಡ್ ಗೆ ಮಣಿದ ಭಾರತ
ಕಾಮನ್‌ವೆಲ್ತ್ ಕ್ರೀಡಾಕೂಟ: ಪುರುಷರ ಹಾಕಿಯಲ್ಲಿ ನ್ಯೂಜಿಲೆಂಡ್ ಗೆ ಮಣಿದ ಭಾರತ
Updated on
ಗೋಲ್ಡ್ ಕೋಸ್ಟ್: 21ನೇ ಆವೃತ್ತಿಯ ಕಾಮನ್‌ವೆಲ್ತ್ ಕ್ರೀಡಾಕೂಟದ ಪುರುಷರ ಹಾಕಿ ವಿಭಾಗದಲ್ಲಿ ಭಾರತ ತಂಡ ಸೆಮೀಸ್ ಹಂತದಲ್ಲಿ ಸೋಲನುಭವಿಸಿದೆ.
ಶುಕ್ರವಾರ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಹೋರಾಟದಲ್ಲಿ ಭಾರತ 3-2 ಗೋಲುಗಳ ಅಂತರದಿಂದ ಪರಾಭವಗೊಂಡಿದೆ.
ಪಂದ್ಯದ ಪ್ರಾರಂಭದಲ್ಲಿ ಎದುರಾಳಿಗಳಿಗೆ 2 ಗೋಲುಗಳನ್ನು ಪಡೆಯಲು ಅವಕಾಶ ನಿಡಿದ್ದ ಬಾರತ ತನ್ನ ತಪ್ಪಿಗೆ ಭಾರೀ ದಂಡ ತೆರಬೇಕಾಯಿತು. 
ನ್ಯೂಜಿಲೆಂಡ್ ಪರ ಹ್ಯೂಗೊ ಇನ್ಗ್ಲಿಸ್ಗೆ (7ನೇ ನಿಮಿಷ) , ಸ್ಟೀಫನ್ ಜನೆನೆಸ್ (13 ನೇ ನಿಮಿಷ)ದಲ್ಲಿ ಎರಡು ಗೋಲುಗಳನ್ನು ಗಳಿಸಿದರೆ  ಭಾರತದ ಪರ ಹರ್ಮನ್ ಪ್ರೀತ್ ಸಿಂಗ್ (29 ನೇ ನಿಮಿಷ) ಪೆನಾಲ್ಟಿ ಸ್ಟ್ರೋಕ್ ಮೂಲಕ  1ಗೋಲು ಗಳಿಸುವಲ್ಲಿ ಸಫಲರಾಗಿದ್ದರು. ಈ ಪ್ರಕಾರ ಮಧ್ಯಂತರದ ವೇಳೆಗೆ ಭಾರತವು 1-2 ಗೋಲು ದಾಖಲಿಸಿತ್ತು.
ಇನ್ನು ಪಂದ್ಯದ ಉತ್ತರಾರ್ಧದಲ್ಲಿ ಮಾರ್ಕಸ್ ಚೈಲ್ಡ್ (40 ನೇ ನಿಮಿಷ) ನ್ಯೂಜಿಲೆಂಡ್  ಪರವಾಗಿ ಮತ್ತೆ 1 ಗೋಲು ಗಳಿಸುವುದರೊಡನೆ .ಎದುರಾಳಿ ತಂಡ 2 ಗೋಲುಗಳ ಮುನ್ನಡೆ ಸಾಧಿಸಲು ನೆರವಾಗಿದ್ದರು.
ಪಂದ್ಯದ  57 ನೇ ನಿಮಿಷದಲ್ಲಿ ಭಾರತವು ಪೆನಾಲ್ಟಿ ಕಾರ್ನರ್ಮೂಲಕ ಕೊರತೆಯನ್ನು ತುಂಬಲು ಮುಂದಾಯಿತಾದರೂ  ಇಷ್ಟರಲ್ಲಿ ಸಮಯ ಮೀರಿ ಹೋಗಿದ್ದು ಯಾವುದೇ ಪ್ರಯೋಜನವುಂಟಾಗಲಿಲ್ಲ. 
ಇದೀಗ ಕಂಚಿನ ಪದಕಕ್ಕಾಗಿ ನಡೆಯುವ ಹೋರಾಟದಲ್ಲಿ ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್ ನ ವಿರುದ್ಧ ಸೆಣಸಬೇಕಿದೆ.
ಇದಕ್ಕೂ ಮುನ್ನ ಗುರುವಾರ ನಡೆದ ಪಂದ್ಯದಲ್ಲಿ ಭಾರತ ಮಹಿಲಾ ಹಾಕಿ ತಂಡ ಸಹ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com