ಕ್ರೀಡೆ

ಏಷ್ಯನ್ ಗೇಮ್ಸ್ 2018: ಬಾಕ್ಸಿಂಗ್ ಫೈನಲ್ ಪ್ರವೇಶಿಸಿದ ಅಮಿತ್, ಭಾರತಕ್ಕೆ ಮತ್ತೊಂದು ಪದಕದ ಭರವಸೆ!

18 ನೇ ಏಷ್ಯನ್ ಕ್ರೀಡಾಕೂಟದಲ್ಲಿ ಫೈನಲ್ ತಲುಪಿದ ಏಕೈಕ ಭಾರತೀಯ ಬಾಕ್ಸರ್ ಆಗಿರುವ ಅಮಿತ್ ಪಂಘಲ್ (49 ಕೆ.ಜಿ). ಫಿಲಿಪೈನ್ಸ್ ನ ಕಾರ್ಲೋ ಪಾಲಮ್ ಅವರನ್ನು ಮಣಿಸಿ ಈ ಸಾಧನೆ ಮಾಡಿದ್ದಾರೆ.

ಏಷ್ಯನ್ ಗೇಮ್ಸ್ 2018: ಬಾಕ್ಸಿಂಗ್ ಫೈನಲ್ ಪ್ರವೇಶಿಸಿದ ಅಮಿತ್, ಭಾರತಕ್ಕೆ ಮತ್ತೊಂದು ಪದಕದ ಭರವಸೆ!
ಅಮಿತ್ ಪಂಘಲ್
Published On :
ಜಕಾರ್ತಾ: 18 ನೇ ಏಷ್ಯನ್ ಕ್ರೀಡಾಕೂಟದಲ್ಲಿ ಫೈನಲ್ ತಲುಪಿದ ಏಕೈಕ ಭಾರತೀಯ ಬಾಕ್ಸರ್ ಆಗಿರುವ ಅಮಿತ್ ಪಂಘಲ್ (49 ಕೆ.ಜಿ). ಫಿಲಿಪೈನ್ಸ್ ನ ಕಾರ್ಲೋ ಪಾಲಮ್ ಅವರನ್ನು ಮಣಿಸಿ ಈ ಸಾಧನೆ ಮಾಡಿದ್ದಾರೆ.
ಶುಕ್ರವಾರ ನಡೆದ ಸೆಮಿಫೈನಲ್ಸ್ ಹಣಾಹಣಿಯಲ್ಲಿ ಅಮಿತ್ ಜಯಗಳಿಸಿದ್ದು ಕನಿಷ್ಟ ಬೆಳ್ಳಿ ಪದಕವನ್ನು ಖಚಿತ ಪಡಿಸಿಕೊಂಡಿದ್ದಾರೆ.
ಹರಿಯಾಣದ ಅಮಿತ್ ಈ ವರ್ಷಾರಂಭದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸಹ ಪಾಲ್ಗೊಂಡು ಬೆಳ್ಳಿ ಪದಕ ಗಳಿಸಿಕೊಂಡಿದ್ದರು.
ಇನ್ನು ಇಂದು ಬೆಳಿಗ್ಗೆ ಭಾರತದ ಇನ್ನೋರ್ವ ಭರವಸೆಯ ಬಾಕ್ಸರ್ ವಿಕಾಸ್ ಕ್ರಿಶನ್ (75 ಕೆಜಿ) ಕಣ್ಣಿನ ಗಾಯದ ಸಮಸ್ಯೆ ಇದ್ದ ಕಾರಣ ನಾಲ್ಕರ ಘಟ್ಟದಿಂದ ಹಿಂದೆ ಸರಿದು ಕಂಚಿನ ಪದಕ ಗಳಿಸಿಕೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.