ವರ್ಲ್ಡ್ ಟೂರ್ ಫೈನಲ್: ನಾಲ್ಕರ ಹಂತಕ್ಕೇರಿದ ಸಿಂಧೂ, ಸೆಮೀಸ್ ಗೆ ಸಮೀರ್ ವರ್ಮಾ

ಚೀನಾದಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವರ್ಲ್ಡ್ ತೂರ್ ಫೈನಲ್ಸ್ ನಲ್ಲಿ ಭಾರತದ ಭರವಸೆಯ ಬ್ಯಾಂಡ್ಮಿಂಟನ್ ತಾರೆಯರಾದ ಪಿವಿ ಸಿಂದೂ ಹಾಗೂ ಸಮೀರ್ ವರ್ಮಾ ಅಂತಿಮ ನಾಲ್ಕರ ಘಟ್ಟಕ್ಕ....
ಪಿ.ವಿ. ಸಿಂಧೂ, ಸಮೀರ್ ವರ್ಮಾ
ಪಿ.ವಿ. ಸಿಂಧೂ, ಸಮೀರ್ ವರ್ಮಾ
ಗುವಾಂಗ್‌ಜೌ: ಚೀನಾದಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವರ್ಲ್ಡ್ ತೂರ್ ಫೈನಲ್ಸ್ ನಲ್ಲಿ ಭಾರತದ ಭರವಸೆಯ ಬ್ಯಾಂಡ್ಮಿಂಟನ್ ತಾರೆಯರಾದ ಪಿವಿ ಸಿಂದೂ ಹಾಗೂ ಸಮೀರ್ ವರ್ಮಾ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದ್ದಾರೆ.
ಒಲಂಪಿಕ್ ಬೆಳ್ಳಿ ಪದಕ ವಿಜೇತರಾದ ಪಿವಿ ಸಿಂಧೂ ವರ್ಲ್ಡ್ ಟೂರ್ ಫೈನಲ್ ನಲ್ಲಿ ತಮ್ಮ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದ್ದು ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಹಣಾಹಣಿಯಲ್ಲಿ ವಿಶ್ವ 12ನೇ ಶ್ರೇಯಾಂಕದ ಅಮೆರಿಕದ ಬೈವೆನ್‌ ಝಾಂಗ್‌ ಅವರನ್ನು 21-9, 21-15 ಸೆಟ್ ಗಳಿಂದ ಮಣಿಸಿ ಸೆಮಿಫೈನಲ್ಸ್ ಹಂತಕ್ಕೇರಿದ್ದಾರೆ.
ಇನ್ನೊಂದೆಡೆ ವಿಶ್ವದ ಅಗ್ರ ಆಟಗಾರರಾದ ಜಪಾನ್‌ನ ಕೆಂಟೊ ಮೊಮೊಟೊ ವಿರುದ್ಧ ಸೋಲುಂಡಿದ್ದ ಸಮೀರ್ ವರ್ಮಾ ಆ ನಂತರ ನಡೆದ ಎರಡೂ ಪಂದ್ಯಗಳನ್ನು ಜಯಿಸಿ ನಾಕೌಟ್ ಹಂತಕ್ಕೆ ತಲುಪಿದ್ದಾರೆ.ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಸಮೀರ್ ವರ್ಮಾ ಥಾಯ್ ಲ್ಯಾಂಡಿನ ಕಾಂತಾಫನ್‌ ವಾಂಗ್‌ಚರೋನ್‌ ವಿರುದ್ಧ 21-9, 21-18  ಸೆಟ್ ಗಳ ಜಯ ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com