ಮಹಿಳಾ ಹಾಕಿ ವಿಶ್ವಕಪ್: ಭಾರತ ತಂಡಕ್ಕೆ ರಾಣಿ ರಾಂಪಾಲ್ ಸಾರಥ್ಯ

ಮುಂದಿನ ತಿಂಗಳು ಲಂಡನ್ ನಲ್ಲಿ ನಡೆಯಲಿರುವ ಮಹಿಳಾ ಹಾಕಿ ವಿಶ್ವಕಪ್ ಗೆ ಭಾರತ ತಂಡ ಪ್ರಕಟಿಸಲಾಗಿದ್ದು, ಸ್ಟೈರ್ಕರ್ ರಾಣಿ...
ಭಾರತ ತಂಡ
ಭಾರತ ತಂಡ
ನವದೆಹಲಿ: ಮುಂದಿನ ತಿಂಗಳು ಲಂಡನ್ ನಲ್ಲಿ ನಡೆಯಲಿರುವ ಮಹಿಳಾ ಹಾಕಿ ವಿಶ್ವಕಪ್ ಗೆ ಭಾರತ ತಂಡ ಪ್ರಕಟಿಸಲಾಗಿದ್ದು, ಸ್ಟೈರ್ಕರ್ ರಾಣಿ ರಂಪಾಲ್ 18 ಸದಸ್ಯರ ತಂಡವನ್ನು ಮುನ್ನಡೆಸಲಿದ್ದಾರೆ. ಗೋಲ್ ಕೀಪರ್ ಸವಿತಾ ಅವರಿಗೆ ಉಪ ನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ.
ಜೂನ್ 21ರಿಂದ ಆರಂಭವಾಗಲಿರುವ  ಪ್ರತಿಷ್ಠಿತ ಹಾಕಿ ವಿಶ್ವಕಪ್ ಗೆ ಇಂದು 18 ಸದಸ್ಯರ ತಂಡ ಪ್ರಕಟಿಸಲಾಗಿದ್ದು, . ಸ್ಪೇನ್ ಪ್ರವಾಸದಲ್ಲಿ ವಿಶ್ರಾಂತಿ ಪಡೆದಿದ್ದ ಗೋಲ್ ಕೀಪರ್ ರಜನಿ ಎತಿಮುರ್ಪು ತಂಡಕ್ಕೆ ವಾಪಸಾಗಿದ್ದಾರೆ.
ಪಂದ್ಯಾವಳಿಯಲ್ಲಿ ಭಾರತ ‘ಬಿ’ ಗುಂಪಿನಲ್ಲಿದ್ದು, ಆತಿಥೇಯ , ವಿಶ್ವದ ನಂಬರ್ 2 ತಂಡ ಇಂಗ್ಲೆಂಡ್, ವಿಶ್ವದ ನಂ.7ನೇ ತಂಡ ಅಮೆರಿಕ ಹಾಗೂ ವಿಶ್ವದ ನಂ.16ನೇ ತಂಡ ಐರ್ಲೆಂಡ್‌ನೊಂದಿಗೆ ಸ್ಥಾನ ಪಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com