ರಫೆಲ್ ನಡಾಲ್ ಹಿಂದಿಕ್ಕಿದ ರೋಜರ್ ಫೆಡರರ್ ವಿಶ್ವದ ನಂಬರ್ 1 ಆಟಗಾರ!

ಮ್ಯಾಡ್ರಿಡ್ ಮಾಸ್ಟರ್ಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಆಶ್ಚರ್ಯ ರೀತಿಯಲ್ಲಿ ಹೊರಬಂದಿದ್ದ ರಫೆಲ್ ನಡಾಲ್ ಇದೀಗ ಎಟಿಪಿ ರ್ಯಾಂಕಿಂಗ್...
ರೋಜರ್ ಫೆಡರರ್
ರೋಜರ್ ಫೆಡರರ್
ಪ್ಯಾರಿಸ್: ಮ್ಯಾಡ್ರಿಡ್ ಮಾಸ್ಟರ್ಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಆಶ್ಚರ್ಯ ರೀತಿಯಲ್ಲಿ ಹೊರಬಂದಿದ್ದ ರಫೆಲ್ ನಡಾಲ್ ಇದೀಗ ಎಟಿಪಿ ರ್ಯಾಂಕಿಂಗ್ ಪಟ್ಟಿಯಲ್ಲೂ ನಂಬರ್ ಒನ್ ಸ್ಥಾನ ಕಳೆದುಕೊಂಡಿದ್ದಾರೆ. 
ಎಟಿಪಿ ಬಿಡುಗಡೆ ಮಾಡಿರುವ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ರಫೆನ್ ನಡಾಲ್ ರನ್ನು ಹಿಂದಿಕ್ಕಿ ರೋಜರ್ ಫೆಡರರ್ ಅಗ್ರಸ್ಥಾನಕ್ಕೇರಿದ್ದಾರೆ. ಇನ್ನು ಮಾಜಿ ನಂಬರ್ ಆಟಗಾರರಾಗಿದ್ದ ನೊವಾಕ್ ಜಾಕೋವಿಚ್ ಆರು ಅಂಕಗಳ ಕುಸಿತ ಕಂಡಿದ್ದು 18ನೇ ಸ್ಥಾನದಲ್ಲಿದ್ದಾರೆ. 
ಮಾಡ್ರಿಡ್ ವಿನ್ನರ್ ಅಲೆಕ್ಸಾಂಡರ್ ಝೆರೆವ್ ಮೂರನೇ ಸ್ಥಾನದಲ್ಲಿದ್ದರೆ ಗ್ರಿಗರ್ ಡಿಮಿಟ್ರೋವ್ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com