ಪೋಲೆಂಡ್ ಕುಟ್ನೋ ಅಥ್ಲೆಟಿಕ್ಸ್ ಮೀಟ್‌: ಭಾರತದ ಹಿಮಾ ದಾಸ್‌ಗೆ ಚಿನ್ನ

ಪೋಲೆಂಡ್ ನಲ್ಲಿ ನಡೆದ ಕುಟ್ನೋ ಅಥ್ಲೆಟಿಕ್ಸ್ ಮೀಟ್‌ನಲ್ಲಿ ಭಾರತದ ಸ್ಟಾರ್ ಓಟಗಾರ್ತಿ ಹಿಮಾ ದಾಸ್ ಮಹಿಳೆಯರ 200 ಮೀ. ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
ಹಿಮಾ ದಾಸ್‌
ಹಿಮಾ ದಾಸ್‌
Updated on
ಪೋಲೆಂಡ್: ಪೋಲೆಂಡ್ ನಲ್ಲಿ ನಡೆದ  ಕುಟ್ನೋ ಅಥ್ಲೆಟಿಕ್ಸ್ ಮೀಟ್‌ನಲ್ಲಿ ಭಾರತದ ಸ್ಟಾರ್ ಓಟಗಾರ್ತಿ ಹಿಮಾ ದಾಸ್ ಮಹಿಳೆಯರ 200 ಮೀ. ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. 
ಕೆಲ ತಿಂಗಳುಗಳ ಕಾಲ ಬೆನ್ನುನೋವಿಂದ ಬಳಲುತ್ತಿದ್ದ ಹಿಮಾ ದಾಸ್ 23.97 ಸೆಕೆಂಡುಗಳಲ್ಲಿ ಗುರಿ ತಲುಪಿ ಈ ಸಾಧನೆ ಮಾಡಿದ್ದಾರೆ. ಇನ್ನೊಂದೆಡೆ 24.06 ಸೆಕೆಂಡ್ ಗಳಲ್ಲಿ ಗುರಿ ಸಾಧಿಸಿದ್ದ ವಿಕೆ ವಿಸ್ಮಯಾ ಬೆಳ್ಳಿ ಪದಕ ಗಳಿಸಿಕೊಂಡಿದ್ದಾರೆ.
ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಹಿಮಾ ದಾಸ್ ಪಾಲಿಗೆ ಇದು ಎರಡನೇ ಚಿನ್ನದ ಪದಕವಾಗಿದೆ.
ರಾಷ್ಟ್ರೀಯ ದಾಖಲೆ ಹೊಂದಿರುವ ಮುಹಮ್ಮದ್ ಅನಸ್ ಪುರುಷರ ವಿಭಾಗದಲ್ಲಿ 200 ಮೀ ಓಟದಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ. ಅವರು 21.18 ಸೆಕೆಂಡುಗಳಲ್ಲಿ ಗುರಿ ತಲುಪಿ ಮೊದಲ ಸ್ಥಾನ ಗಳಿಸಿಕೊಂಡಿಅರು.
ಪುರುಷರ 400 ಮೀ ಹರ್ಡಲ್ಸ್‌ನಲ್ಲಿ ಎಂ ಪಿ ಜಬೀರ್ ಚಿನ್ನ ಗಳಿಸಿದರೆ ಜಿಥಿನ್ ಪಾಲ್ ಕಂಚಿನ ಪದಕ ಜಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com