ಒಲಿಂಪಿಕ್ಸ್‌ ಅರ್ಹತಾ ಪಂದ್ಯಗಳಿಗೆ ಭಾರತ ಹಾಕಿ ತಂಡ ಪ್ರಕಟ

ಮುಂಬರುವ ಎಫ್‌ಐಎಚ್ ಹಾಕಿ ಒಲಿಂಪಿಕ್‌ಸ್‌ ಅರ್ಹತಾ ಸುತ್ತಿನ ಟೂರ್ನಿಗೆ ಪುರುಷರ ಹಾಗೂ ಮಹಿಳೆಯರ ಭಾರತ ಹಾಕಿ ತಂಡಗಳನ್ನು ಪ್ರಕಟಿಸಲಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಮುಂಬರುವ ಎಫ್‌ಐಎಚ್ ಹಾಕಿ ಒಲಿಂಪಿಕ್‌ಸ್‌ ಅರ್ಹತಾ ಸುತ್ತಿನ ಟೂರ್ನಿಗೆ ಪುರುಷರ ಹಾಗೂ ಮಹಿಳೆಯರ ಭಾರತ ಹಾಕಿ ತಂಡಗಳನ್ನು ಪ್ರಕಟಿಸಲಾಗಿದೆ.

ಯಾವುದೇ ಬದಲಾವಣೆ ಇಲ್ಲದ 18 ಆಟಗಾರ್ತಿಯರ ಭಾರತ ಮಹಿಳಾ ಹಾಕಿ ತಂಡವನ್ನು ಎಂದಿನಂತೆ ರಾಣಿ ರಾಂಪಾಲ್ ಅವರು ಮುನ್ನಡೆಸಲಿದ್ದಾರೆ. 18 ಮಂದಿ ಪುರುಷರ ಭಾರತ ತಂಡವನ್ನು ಮನ್‌ಪ್ರೀತ್ ಸಿಂಗ್ ಮುನ್ನಡೆಸಲಿದ್ದಾರೆ. ಕನ್ನಡಿಗ ಎಸ್.ವಿ ಸುನೀಲ್ ಉಪ ನಾಯಕನ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಮಹಿಳೆಯರ ತಂಡಕ್ಕೆೆ ಗೋಲ್ ಕೀಪರ್ ಸವಿತಾ ಉಪ ನಾಯಕಿಯಾಗಿದ್ದಾರೆ.

ಓಡಿಶಾದಲ್ಲಿ ಪುರುಷ ಹಾಗೂ ಮಹಿಳಾ ಎರಡೂ ತಂಡಗಳು ಟೋಕಿಯೊ ಒಲಿಂಪಿಕ್‌ಸ್‌ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ತೊಡಗಲಿವೆ. ಐದನೇ ಶ್ರೇಯಾಂಕದ ಭಾರತ ಪುರುಷರ ತಂಡ 22ನೇ ಶ್ರೇಯಾಂಕದ ರಷ್ಯಾ ವಿರುದ್ಧ ಸೆಣಸಲಿದೆ. ಇದರ ಜತೆ ಒಂಬತ್ತನೇ ಶ್ರೇಯಾಂಕದ ಭಾರತ ವನಿತೆಯರು 13ನೇ ಸ್ಥಾನದ ಯುಎಸ್‌ಎ ವಿರುದ್ಧ ಕಾದಾಟ ನಡೆಸಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com