ಫ್ರೆಂಚ್ ಓಪನ್: ಕ್ವಾರ್ಟರ್ ಫೈನಲ್‍ನಲ್ಲಿ ಎಡವಿದ ಸಿಂಧು

ವಿಶ್ವ ಚಾಂಪಿಯನ್ ಭಾರತದ ಪಿ.ವಿ ಸಿಂಧು ಅವರು ಇಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋತು ನಿರ್ಗಮಿಸಿದ್ದಾರೆ.
ಪಿ.ವಿ ಸಿಂಧು
ಪಿ.ವಿ ಸಿಂಧು
Updated on

ಪ್ಯಾರಿಸ್ : ವಿಶ್ವ ಚಾಂಪಿಯನ್ ಭಾರತದ ಪಿ.ವಿ ಸಿಂಧು ಅವರು ಇಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋತು ನಿರ್ಗಮಿಸಿದ್ದಾರೆ.

ವಿಶ್ವದ ಆರನೇ ಶ್ರೇಯಾಂಕಿತೆ ಪಿ.ವಿ ಸಿಂಧು ಅವರು ಶುಕ್ರವಾರ ತಡರಾತ್ರಿ ನಡೆದ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಕಠಿಣ ಹೋರಾಟದ ಹೊರತಾಗಿಯೂ ಚೈನೀಸ್ ತೈಫೆಯ ಅಗ್ರ ಶ್ರೇಯಾಂಕಿತೆ ತಾಯ್ ಟಿಜು ಯಿಂಗ್ ವಿರುದ್ಧ 16-21, 26-24, 17-21 ಅಂತರದಲ್ಲಿ ಸೋಲು ಅನುಭವಿಸಿದರು. ಆ ಮೂಲಕ ಒಂದು ಗಂಟೆ 15 ನಿಮಿಷಗಳ ಕಾಲದ ಪಂದ್ಯವನ್ನು ಬಿಟ್ಟುಕೊಡುವ ಮೂಲಕ ಫ್ರೆಂಚ್ ಅಭಿಯಾನ ಅಂತ್ಯಗೊಳಿಸಿದರು.

ಪಂದ್ಯದ ಮೊದಲನೇ ಸೆಟ್ ನ ಆರಂಭದಲ್ಲಿ ತಾಯ್ ಟಿಜು ಹಾಗೂ ಸಿಂಧು ಅವರ ನಡುವೆ ಹೋರಾಟ ಸಲಮಬಲದಿಂದ ಕೂಡಿತ್ತು. ಆದರೆ, ಅದ್ಭತ ಪ್ರದರ್ಶನದಿಂದ ಗಮನ ಸೆಳೆದ ಚೈನೀಸ್ ತೈಫೆ ಆಟಗಾರ್ತಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಆರಂಭಿಕ ಸೆಟ್‍ನಲ್ಲಿ ಮಧ್ಯೆಯಲ್ಲಿ ಸಿಂಧು ಕೇವಲ ಒಂದು ಅಂಕ ಅಂತರ ಕಾಯ್ದುಕೊಂಡಿದ್ದರು. ನಂತರ ಪುಟಿದೆದ್ದ ಯಿಂಗ್ ಮೊದಲನೇ ಸೆಟ್ ಅನ್ನು ತನ್ನದಾಗಿಸಿಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com