ಟೋಕಿಯೊ ಒಲಂಪಿಕ್ಸ್: ಭಾರತಕ್ಕೆ ಮತ್ತೊಂದು ಪದಕ ಖಚಿತ, ಸೆಮಿಸ್‌ಗೆ ಎಂಟ್ರಿ ಕೊಟ್ಟ ಭಾರತ ಹಾಕಿ ತಂಡ

ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತ ಹಾಕಿ ಪುರುಷರ ತಂಡ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದ್ದು ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿದೆ.
ಭಾರತ ಪುರುಷರ ಹಾಕಿ ತಂಡ
ಭಾರತ ಪುರುಷರ ಹಾಕಿ ತಂಡ
Updated on

ಟೋಕಿಯೊ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾನುವಾರ ನಡೆದ ಹಾಕಿ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಭಾರತೀಯ ತಂಡ ಗ್ರೇಟ್ ಬ್ರಿಟನ್ ವಿರುದ್ಧ 3-1 ಗೋಲಿನಿಂದ ಜಯಗಳಿಸುವುದರೊಂದಿಗೆ ಸೆಮಿಫೈನಲ್ಸ್ ಗೆ ಲಗ್ಗೆ ಇಟ್ಟಿದೆ.

ಭಾರತ ತಂಡದ ಪರವಾಗಿ ದಿಲ್ ಪ್ರೀತ್ ಸಿಂಗ್ (7ನೇ ನಿಮಿಷ), ಗುರ್ಜಂತ್ ಸಿಂಗ್(16ನೇ ನಿಮಿಷ) ಹಾಗೂ ಹಾರ್ದಿಕ್ ಸಿಂಗ್(57ನೇ ನಿಮಿಷ) ತಲಾ ಒಂದು ಗೋಲು ಗಳಿಸಿದರು. ಗ್ರೇಟ್ ಬ್ರಿಟನ್ ಪರವಾಗಿ ಸ್ಯಾಮುಯೆಲ್ ವಾರ್ಡ್(45ನೇ ನಿಮಿಷ) ಪಂದ್ಯದಲ್ಲಿ ಏಕಮಾತ್ರ ಗೋಲು ಗಳಿಸಿದರು.

ಈ ಗೆಲುವಿನೊಂದಿಗೆ ಭಾರತೀಯ ಪುರಷರ ಹಾಕಿ ತಂಡ 49 ವರ್ಷಗಳ ನಂತರ ಸೆಮಿಫೈನಲ್ಸ್ ಗೆ ಪ್ರವೇಶಿಸಿದೆ. 1972ರಲ್ಲಿ ಮುನಿಚ್ ಒಲಿಂಪಿಕ್ಸ್ ನ ಸೆಮಿಫೈನಲ್ಸ್ ಭಾರತ ಆಡಿದ್ದು, ಈ ಪಂದ್ಯದಲ್ಲಿ ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 0-2 ಗೋಲಿನಿಂದ ಪರಾಭವಗೊಂಡಿತ್ತು. 

ಮಂಗಳವಾರ ನಡೆಯುವ ಸೆಮಿಫೈನಲ್ಸ್ ಪಂದ್ಯದಲ್ಲಿ ಭಾರತ, ಬೆಲ್ಜಿಯಂ ವಿರುದ್ಧ ಸೆಣಸಲಿದೆ. ಕ್ವಾರ್ಟರ್ ಫೈನಲ್ಸ್ ನಲ್ಲಿ ಬೆಲ್ಜಿಯಂ, ಸ್ಪೇನ್‍ ವಿರುದ್ಧ 3-1ರಿಂದ ಜಯಗಳಿಸಿ ಸೆಮಿಫೈನಲ್ಸ್ ಪ್ರವೇಶಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com