ಟೋಕಿಯೊ: ಟೊಕಿಯೊ ಒಲಂಪಿಕ್ಸ್ ಮೇಲೆ ಮಹಾಮಾರಿ ಕೊರೋನಾ ಕರಿನೆರಳು ಬಿದ್ದಿದ್ದು, ಮತ್ತೆ 18 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ.
ಈ ಕುರಿತು ಒಲಂಪಿಕ್ಸ್ ಆಯೋಜಕರು ಮಾಹಿತಿ ನೀಡಿದ್ದು, ಭಾನುವಾರ ಒಂದೇ ದಿನ 18 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.
18 ಮಂದಿಯಲ್ಲಿ 11 ಮಂದಿ ಗುತ್ತಿಗೆದಾರರು, 5 ಮಂದಿ ಅಧಿಕಾರಿಗಳು ಹಾಗೂ ಓರ್ವ ಸಿಬ್ಬಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
18 ಮಂದಿಯಲ್ಲಿ ಐವರು ವಿದೇಶದವರಾಗಿದ್ದು, 13 ಮಂದಿ ಜಪಾನ್ ನಿವಾಸಿಗಳೇ ಆಗಿದ್ದಾರೆ. ಇದರೊಂದಿಗೆ ಸೋಂಕಿಗೆ ಒಳಗಾದವರ ಒಟ್ಟು ಸಂಖ್ಯೆ 259ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement