ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್‌: 43 ಪದಕಗಳೊಂದಿಗೆ ಅಗ್ರಸ್ಥಾನದಲ್ಲಿ ಭಾರತ!

ಲಿಮಾದಲ್ಲಿ ನಡೆದ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತ 17 ಚಿನ್ನ ಸೇರಿದಂತೆ 43 ಪದಕಗಳನ್ನು ಗೆದ್ದುಕೊಂಡಿದೆ.
ಭಾರತೀಯ ಶೂಟರ್ಸ್
ಭಾರತೀಯ ಶೂಟರ್ಸ್
Updated on: 

ನವದೆಹಲಿ: ಲಿಮಾದಲ್ಲಿ ನಡೆದ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತ 17 ಚಿನ್ನ ಸೇರಿದಂತೆ 43 ಪದಕಗಳನ್ನು ಗೆದ್ದುಕೊಂಡಿದೆ.

ಪೆರುವಿಯನ್ ರಾಜಧಾನಿ ಲಿಮಾದಲ್ಲಿ ಲಾಸ್ ಪಾಲ್ಮಾಸ್ ಶೂಟಿಂಗ್ ರೇಂಜ್‌ನಲ್ಲಿ ನಡೆದ ಟಾಪ್ ಜೂನಿಯರ್ ಪಂದ್ಯಾವಳಿಯ ಅಂತಿಮ ಸ್ಪರ್ಧೆಯ ದಿನದಂದು ದೇಶದ ಶೂಟರ್‌ಗಳು 12 ಪದಕಗಳನ್ನು ಗೆದ್ದರು.

ವಿಜಯವೀರ್ ಸಿಧು, ರಿದಮ್ ಸಾಂಗ್ವಾನ್, ಅರ್ಜುನ್ ಸಿಂಗ್ ಚೀಮಾ ಮತ್ತು ಶಿಖಾ ನರ್ವಾಲ್ ಅಂತಿಮ ದಿನದಲ್ಲಿ ಭಾರತದ ಚಿನ್ನದ ಪದಕ ವಿಜೇತರಾಗಿದ್ದು, ದೇಶವು 17 ಚಿನ್ನದೊಂದಿಗೆ ಅಗ್ರಸ್ಥಾನದಲ್ಲಿದೆ.

ಭಾರತವು 17 ಚಿನ್ನದ ಜೊತೆಗೆ 16 ಬೆಳ್ಳಿ ಮತ್ತು 10 ಕಂಚಿನ ಪದಕಗಳೊಂದಿಗೆ ಕೂಟವನ್ನು ಮುಕ್ತಾಯಗೊಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com