BCCI ಎಂಬ ಚಿನ್ನದ ಮೊಟ್ಟೆ! ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿ ಹಣ ಮಾಡೋದು ಹೇಗೆ?

ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವ BCCI ಒಂದು ವರ್ಷದಲ್ಲಿ ಸುಮಾರು ₹9,700 ಕೋಟಿಗೂ ಅಧಿಕ ಆದಾಯ ಗಳಿಸುತ್ತಿದ. ಹಾಗಾದ್ರೆ, ಯಾವುದೇ ಸರ್ಕಾರಿ ಧನಸಹಾಯವನ್ನು ಪಡೆಯದೆಯೂ, ಇಷ್ಟೊಂದು ಕೋಟಿ ಕೋಟಿ ಆದಾಯ ಮಾಡೋದು ಹೇಗೆ ಗೊತ್ತಾ?
BCCI
ಬಿಸಿಸಿಐonline desk
Updated on

ಮುಂಬೈ: ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಒಂದು ವರ್ಷದಲ್ಲಿ ಸುಮಾರು ₹9,700 ಕೋಟಿಗೂ ಅಧಿಕ ಆದಾಯ ಗಳಿಸುತ್ತಿದ. ಹಾಗಾದ್ರೆ, ಯಾವುದೇ ಸರ್ಕಾರಿ ಧನಸಹಾಯವನ್ನು ಪಡೆಯದೆಯೂ, ಇಷ್ಟೊಂದು ಕೋಟಿ ಕೋಟಿ ಆದಾಯ ಮಾಡೋದು ಹೇಗೆ ಗೊತ್ತಾ? ಇಲ್ಲಿದೆ ಆ ಕುರಿತ ಶಾಕಿಂಗ್ ವರದಿ:

ಐಪಿಎಲ್ ಎಂಬ ಚಿನ್ನದ ಮೊಟ್ಟೆ!

ಬಿಸಿಸಿಐ ಒಟ್ಟು ಆದಾಯದ ಸುಮಾರು ಶೇ. 59ರಷ್ಟು ಭಾಗ ಕೇವಲ ಐಪಿಎಲ್ ಟೂರ್ನಿಯಿಂದಲೇ ಬರುತ್ತದೆ. ಐಪಿಎಲ್ ಪಂದ್ಯಗಳನ್ನು ಟಿವಿ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರ ಮಾಡಲು ಕಂಪನಿಗಳು ಬಿಲಿಯನ್ ಡಾಲರ್ ಬೆಲೆ ತೆರುತ್ತವೆ. (ಉದಾಹರಣೆಗೆ, 2023 ರಿಂದ 2027 ರವರೆಗಿನ ಐಪಿಎಲ್ ಮಾಧ್ಯಮ ಹಕ್ಕುಗಳನ್ನು ದಾಖಲೆಯ ₹48,390 ಕೋಟಿ ಮೊತ್ತಕ್ಕೆ ಸ್ಟಾರ್ ಸ್ಪೋರ್ಟ್ಸ್ ಗೆ ಮಾರಾಟ ಮಾಡಲಾಗಿದೆ.) ಇದರೊಂದಿಗೆ, ಐಪಿಎಲ್‌ನ ಪ್ರತಿ ತಂಡವು ತಮ್ಮ ವಾರ್ಷಿಕ ಗಳಿಕೆಯ ಒಂದು ನಿರ್ದಿಷ್ಟ ಪಾಲನ್ನು ಬಿಸಿಸಿಐಗೆ ನೀಡಬೇಕಾಗುತ್ತದೆ. ಜೊತೆಗೆ ಇತ್ತೀಚೆಗೆ ಆರಂಭಿಸಲಾದ ಮಹಿಳಾ ಪ್ರೀಮಿಯರ್ ಲೀಗ್ ಕೂಡ ನೂರಾರು ಕೋಟಿ ಲಾಭ ತಂದುಕೊಡುತ್ತಿದೆ.

ICC ಆದಾಯದ ಪಾಲು:

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಜಗತ್ತಿನಾದ್ಯಂತ ಆಯೋಜಿಸುವ ವಿಶ್ವಕಪ್‌ನಂತಹ ಟೂರ್ನಿಗಳಿಂದ ಬರುವ ಒಟ್ಟು ನಿವ್ವಳ ಆದಾಯದಲ್ಲಿ ಅತಿ ದೊಡ್ಡ ಪಾಲನ್ನು (ಸುಮಾರು 38.5% ರಿಂದ 40%) ಬಿಸಿಸಿಐಗೆ ನೀಡುತ್ತದೆ. ಯಾಕಂದ್ರೆ, ಭಾರತದಲ್ಲಿ ಕ್ರಿಕೆಟ್ ವೀಕ್ಷಕರ ಸಂಖ್ಯೆ ಹೆಚ್ಚಿರುವುದರಿಂದ ಐಸಿಸಿಯಿಂದ ಬಿಸಿಸಿಐಗೆ ಕಳೆದ ವರ್ಷ ಸುಮಾರು ₹2,189 ಕೋಟಿ ಹಣ ಸಂದಾಯವಾಗಿದೆ.

1 ಸಾವಿರ ಕೋಟಿ ಬಡ್ಡಿ!

ಬಿಸಿಸಿಐನ ಬ್ಯಾಂಕ್ ಖಾತೆಗಳು ಮತ್ತು ಫಿಕ್ಸೆಡ್ ಡಿಪಾಸಿಟ್‌ಗಳಲ್ಲಿ ಸುಮಾರು ₹30,000 ಕೋಟಿಗೂ ಅಧಿಕ ಹಣವಿದೆ. ಈ ಬೃಹತ್ ಮೊತ್ತದ ಮೇಲಿನ ಬಡ್ಡಿಯಿಂದಲೇ ಬಿಸಿಸಿಐಗೆ ವಾರ್ಷಿಕವಾಗಿ ₹980 ಕೋಟಿಗೂ ಹೆಚ್ಚು ಆದಾಯ ಹರಿದುಬರುತ್ತದೆ.

BCCI
Commonwealth Games: ಭಾರತಕ್ಕೆ ಡಬಲ್ ಧಮಾಕಾ; ಪದಕ ಗೆದ್ದ ಕನ್ನಡತಿ ಶಿಲ್ಪಾ; Video

ಪ್ರಾಯೋಜಕತ್ವ:

ಭಾರತ ತಂಡ ಮತ್ತು ದೇಶೀಯ ಕ್ರಿಕೆಟ್ ಸರಣಿಗಳಿಗೆ ಬಿಸಿಸಿಐ ವಿವಿಧ ರೀತಿಯ ಸ್ಪಾನ್ಸರ್‌ಶಿಪ್ ಒಪ್ಪಂದಗಳನ್ನು ಮಾಡಿಕೊಳ್ಳುತ್ತದೆ. ಅದರಂತೆ, ಭಾರತದಲ್ಲಿ ನಡೆಯುವ ಸರಣಿಗಳಿಗೆ ಹೆಸರಿಡಲು (ಟೈಟಲ್ ಸ್ಪಾನ್ಸರ್) ಬ್ರ್ಯಾಂಡ್‌ಗಳ ನೀಡುವ ಹಣ. ಜೊತೆಗೆ ಟೀಮ್ ಇಂಡಿಯಾ ಜರ್ಸಿ ಮೇಲೆ ಲೋಗೋ ಹಾಕಲು ಮತ್ತು ಕಿಟ್ ತಯಾರಿಸಲು ಕಂಪನಿಗಳು ಕೋಟಿಗಟ್ಟಲೆ ಹಣ ಪಾವತಿಸುತ್ತವೆ.

ಇದರೊಂದಿಗೆ, ಭಾರತೀಯ ಕ್ರಿಕೆಟ್ ತಂಡವು ಭಾರತದ ನೆಲದಲ್ಲಿ ಇತರ ದೇಶಗಳ ವಿರುದ್ಧ ಆಡುವ ಪಂದ್ಯಗಳ (ಟೆಸ್ಟ್, ಒನ್ಡೇ, ಟಿ20) ಪ್ರಸಾರ ಹಕ್ಕನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ. ಈ ಹಕ್ಕುಗಳನ್ನು ಖರೀದಿಸಲು ಭಾರಿ ಮೊತ್ತದ ಒಪ್ಪಂದ ಮಾಡಿಕೊಳ್ಳುತ್ತವೆ. ಜೊತೆಗೆ, ಪಂದ್ಯಗಳು ನಡೆಯುವಾಗ ಕ್ರೀಡಾಂಗಣದ ಟಿಕೆಟ್ ಮಾರಾಟ, ಸ್ಟೇಡಿಯಂ ಒಳಗಿನ ಜಾಹೀರಾತು ಮತ್ತು ಫುಡ್ ಮಾರಾಟದ ಕಂಟ್ರ್ಯಾಕ್ಟ್‌ಗಳ ಮೂಲಕವೂ ಕೋಟ್ಯಂತರ ರೂಪಾಯಿ ಆದಾಯ ಬರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com