ಒನ್‌ವೇನಲ್ಲಿ ಸ್ಕೂಟರ್ ಓಡಿಸಿದ ಗುಂಡನಿಗೆ ಟ್ರಾಫಿಕ್ ಇನ್ಸ್‌ಪೆಕ್ಟರ್ ದಂಡ ಹಾಕಿದರು. "ಸಾರ್, ಊರಿಗೆ ಹೊಸಬ ದಯ ಮಾಡಿ ಬಿಟ್ಟು ಬಿಡಿ" ಎಂದು ಗುಂಡ ಅಂಗಲಾಚಿದ. ಟ್ರಾಫಿಕ್ ಇನ್ಸ್‌ಪೆಕ್ಟರ್ ನಾನೂ ಹೊಸದಾಗಿ ಅಪಾಯಿಂಟ್ ಆಗಿದೀನಿ, ನಿಮ್ಮದೇ ಮೊದಲನೇ ಕೇಸು ಹೇಗೆ ಬಿಡೋದು ಎಂದ.
ತಿಮ್ಮನಿಗೆ ಅಸಾಧ್ಯ ಮರೆವು. ತಿಮ್ಮಿಯನ್ನೇ ಮರೆತುಬಿಡುತ್ತಿದ್ದ, ಅದಕ್ಕಾಗಿ ತಿಮ್ಮಿ ನಾನು ತಿಮ್ಮನ ಹೆಂಡತಿ ಎಂದು ಹಣೆಪಟ್ಟಿ ಅಂಟಿಸಿಕೊಂಡಿದ್ದಳು. ಅದನ್ನು ಓದಿದ ತಿಮ್ಮ, ಅಂದ ಹಾಗೆ ನಿನ್ನ ಗಂಡ ಯಾರು ಎಂದು ಕೇಳಿದ!
ಶಿವ ಬಸ್‌ಸ್ಟ್ಯಾಂಡ್‌ನಿಂದ ಮನೆಗೆ ಹೋಗಲು ಆಟೋದವನಿಗೆ ಎಷ್ಟು ಕೊಡಬೇಕು' ಅಂದ. ಮೀಟರ್ ಮೇಲೆ ಇಪ್ಪತ್ತು ರುಪಾಯಿ ಅಂದ ಆಟೋ ಡ್ರೈವರ್. ಮನೆಯ ಮುಂದೆ ಆಟೋ ಇಳಿದು ಮೀಟರ್ ಮೇಲೆ ಹತ್ತರ ಎರಡು ನೋಟು ಇಟ್ಟು ಮನೆ ಒಳಕ್ಕೆ ನಡೆದ ಶಿವ. ರಿಕ್ಷಾ ಡ್ರೈವರ್ ಮೀಟರ್ ತೋರಿಸೊ ಹಣಕ್ಕಿಂತ ಇಪ್ಪತ್ತು ಜಾಸ್ತಿ ಕೊಡಿ ಅಂದ. ಹಾಗಾದರೆ ಮತ್ತೆ ಬಸ್‌ಸ್ಟ್ಯಾಂಡಿಗೆ ನಡಿ. ಅಲ್ಲಿ ಮೀಟರ್ ಎಷ್ಟು ತೋರಿಸುತ್ತೊ ನೋಡಿ ಹಣ ಕೊಡ್ತೀನಿ ಎಂದು ಮತ್ತೆ ಆಟೋ ಹತ್ತಿದ.
ರಂಗಿ ವಿಷ ಕುಡಿದು ಐ.ಸಿ.ಯು. ನಲ್ಲಿದ್ದಳು ಪೊಲೀಸರು "ನೀನು ಹೆಂಡತೀನ ಪ್ರೀತಿ ಇಂದ ನೋಡ್ತಿರಲಿಲ್ಲ ಅದಕ್ಕೆ ವಿಷ ಕುಡ್ದಿದ್ದಾಳೆ" ಎಂದು ರಂಗನನ್ನು ತರಾಟೆಗೆ ತೊಗೊಂಡರು. "ಅವಳು ಕೇಳಿದ್ದನ್ನೆಲ್ಲಾ ತಂದು ಕೊಡ್ತಿದ್ದೆ, ಹಾಗೇ ಒಮ್ಮೆ ವಿಷ ಕೇಳಿದಳು. ತಂದು ಕೊಟ್ಟಿದ್ದು ನನ್ನ ತಪ್ಪಾ ಹೇಳಿ ಸ್ವಾಮಿ" ಎಂದ ರಂಗ!
-ಶಿವನಾಪುರ ನರಸಿಂಹಮೂರ್ತಿ