ಜಾಹಿರಾತು ಕಂಪನಿ : ನಿಮ್ಮ ಬಟ್ಟೆ ಕಲೆಯಾಗಿದೆಯೇ? ಚಿಂತೆ ಬಿಡಿ ಸರ್ಫ್ಎಕ್ಸೆಲ್ ಇದೆಯಲ್ಲ?!
ಗೃಹಿಣಿ : ಅಯ್ಯೋ ನಮ್ಮ ಮನೆಯಲ್ಲಿ ಸರ್ಫ್ ಎಕ್ಸೆಲ್ ಖಾಲಿಯಾಗಿದೆ.
ಪಕ್ಕದ ಮನೆಯ ಗೃಹಿಣಿ : ನಿಮ್ಮ ಮನೆಯಲ್ಲಿ ಸರ್ಫ್ ಎಕ್ಸೆಲ್ ಖಾಲಿಯಾಗಿದೆಯೇ ? ಚಿಂತೆ ಬಿಡಿ. ಮನೆಯಲ್ಲಿ ನಿಮ್ಮ ಯಜಮಾನರಿರುವರ(ನ)ಲ್ಲ !!
ನ
ಗುಂಡನಿಗೆ ವೈವಾಹಿಕ ಜೀವನ ಬೇಸರವೆನಿಸಿ ಬಿಟ್ಟಿತು. ಸೀದಾ ಕಾಡಿಗೆ ಹೋಗಿ ತಪಸ್ಸಿಗೆ ಕೂತು ಬಿಟ್ಟ. ತುಂಬಾ ವರ್ಷಗಳ ನಂತರ ಗುಂಡನ ಶ್ರದ್ದೆ ಮತ್ತು ಭಕ್ತಿಗೆ ಮೆಚ್ಚಿ ದೇವರು ಪ್ರತ್ಯಕ್ಷನಾಗಿಯೇ ಬಿಟ್ಟ!
ದೇವರು : ಗುಂಡಾ, ನಿನ್ನ ಭಕ್ತಿಗೆ ನಾನು ಸಂತುಷ್ಟನಾಗಿರುವೆ. ನಿನಗೇನು ವರ ಬೇಕು ಕೇಳಿಕೋ?
ಗುಂಡ : ಓ.. ಮೈ ಗಾಡ್! ನಾನು ಏನೇ ಕೇಳಿದರೂ ಕರುಣಿಸುವೆಯಾ?
ದೇವರು : (ಭರ್ತಿ ಆತ್ಮವಿಶ್ವಾಸದಿಂದ) ಓ.... ಯೆಸ್
ಗುಂಡ : ಭಗವಂತ, ನನ್ನ ಬದುಕಿನಲ್ಲಿ ಯಾವುದರಲ್ಲಿಯೂ ನನಗೆ ಸ್ವಾತಂತ್ರ್ಯ ಇಲ್ಲದಂತಾಗಿದೆ. ದಯವಿಟ್ಟು ನನ್ನ ಹೆಂಡತಿಯಿಂದ ನನಗೆ ಬಿಡುಗಡೆಯ ಭಾಗ್ಯವನ್ನು ಕರುಣಿಸು...
ಗುಂಡನ ಬೇಡಿಕೆಯನ್ನಾಲಿಸಿದ ದೇವರೇ ಕ್ಷಣ ತಬ್ಬಿಬ್ಬಾದ ಮತ್ತು ಥಟ್ಟಂತ ಮಾಯವಾದ! ಹೀಗೆ ಮಾಯವಾದ ದೇವರು ಸೀದಾ ಹಿಮಾಲಯಕ್ಕೆ ಹೋಗಿ ತಪಸ್ಸಿಗೆ ಕೂತ....! <
= ನವೀನ್ ಮಧುಗಿರಿ