ತಯಾರಿ

Updated on: 

ಹೇಗೆ! ನಡೆಸಿದ್ದೀರಿ
ಮುಂದಿನ ಜೀವನ ತಯಾರಿ?

ಹಣ್ಣಾದಂತೆ ಕಣ್ಣು ಹೃದಯ
ಕಿಡ್ನಿ ಹಲ್ಲು
ಎಲ್ಲಕ್ಕೂ ಬೇಕು ಸರ್ಜರಿ
ಸಾಕಾಗುವುದಿಲ್ಲ
ಉಳಿಸಿಟ್ಟಿದ್ದ ತಿಜೋರಿ.

ಆಮೇಲೆ ಔಷದಿ, ಉಪಚಾರ
ಮಾತು- ನಗು ಕುಶಲೋಪರಿ
ಎಲ್ಲವೂ ದುಬಾರಿ.

ಕೊನೆಗೆ ನಾಲ್ಕು ಜನ
ಹೊತ್ತು ಹೋಗುವ ಜಂಬೂ ಸವಾರಿ
ಯಾರದೋ ಹೆಗಲು
ಯಾವುದೋ ಮಣ್ಣಿನ ಮಡಿಲು
ಕೊನೆಯ ಮುಟ್ಟಿಸುವ ಗುರಿ

ಸರಿ; ಯಾವ ದೇಶದಲ್ಲಿದ್ದಾರೆ
ಮಕ್ಕಳು- ಮರಿ
ಬರಬೇಕು ಹಾರಿ
ಸಪ್ತಸಾಗರಗಳ ದಾರಿ
ಎಲ್ಲಿದೆ! ಬಂದೇ ಬರುವ ಖಾತರಿ

ಎಲ್ಲವೂ ಈಗಲೇ ನೆನೆದರೆ
ಮೈಮನ ಹೌಹಾರಿ
ಒಂದು ಕ್ಷಣ ಪ್ರಾಣವೇ
ಹೋದಂತೆ ಹಾರಿ
ಕವಿದಂತೆ ಸುತ್ತಲು
ಕಗ್ಗತ್ತಲು ರಾತ್ರಿ.

ಸ್ಮಶಾನ, ಚಿತಾಗಾರ
ಅಲ್ಲೂ ಕಾಯುತ್ತಿರುತ್ತಾನೆ
ಲಾಭ ಗಳಿಸಲು ವ್ಯಾಪಾರಿ.

ಇಟ್ಟೆಲ್ಲ ಏಕೆ?
ನಾಳಿನ ಚಿಂತೆ ಬೇಕೆ?
'ಹೆಣ'ವಾಗಿ ಬಿದ್ದಾಗ
ಅದು ಇದ್ದ ಬದ್ದವರ
ವಿಲೇವಾರಿಯ ಜವಾಬ್ದಾರಿ
ನಮಗೇಕೆ ಈಗ
ಆ ಉಸಾಬರಿ?

- ಜರಗನಹಳ್ಳಿ ಶಿವಶಂಕರ್
ಮೊ. 94483 56850

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com