ಮಕರಂದ/ದೋಣಿ

ಕಾಲುಂಗುರ ಕಂಡಾಕ್ಷಣ ಲಕ್ಷ್ಮಣ ಮಾತಾಡಿದ...

Published On :

ರಾಮ-ಸೀತೆಯರು ವನವಾಸಕ್ಕೆಂದು ತೆರಳಿದಾಗ ತಮ್ಮ ಲಕ್ಷ್ಮಣನೂ ಅಣ್ಣನ ಜೊತೆಯಾದ. ಕಾಡಿನಲ್ಲಿ ಅವರ ಬೇಕುಬೇಡಗಳನ್ನು ಅರಿತು, ಅವರ ರಕ್ಷಣೆಗೆ ಬೆಂಗಾವಲಾಗಿ ನಿಂತು, ಹಗಲೂ-ರಾತ್ರಿ ಅನನ್ಯ ಭಕ್ತಿ ಗೌರವಗಳಿಂದ ಸೇವೆ ಮಾಡಿದ. ಅವನು ಸೀತಾ ಮಾತೆಯ ಮೇಲಿಟ್ಟ ಗೌರವ, ಭಕ್ತಿಯನ್ನು ನಿರೂಪಿಸುವ ಒಂದು ಘಟನೆ ಇಲ್ಲಿದೆ.
 ರಾವಣನು ಸೀತೆಯನ್ನು ಅಪಹರಿಸಿ ಲಂಕೆಗೆ ಕೊಂಡೊಯ್ದ ಸಂದರ್ಭ. ರಾಮ-ಲಕ್ಷ್ಮಣರು ಸೀತೆಯನ್ನು ಹುಡುಕುತ್ತಾ ಕಿಷ್ಕಿಂಧೆಗೆ ಬಂದಾಗ ಅಲ್ಲಿನ ಕಪಿಗಳು ಕಾಡಿನಲ್ಲಿ ಸಿಕ್ಕ ಆಭರಣದ ಗಂಟೊಂದನ್ನು ತಂದು ಕೊಡುತ್ತವೆ. ರಾವಣನು ಸೀತೆಯನ್ನು ತನ್ನ ಪುಷ್ಪಕ ವಿಮಾನದಲ್ಲಿ ಕರೆದೊಯ್ಯುವಾಗ ಸೀತೆ ತನ್ನ ಆಭರಣಗಳನ್ನು ತನ್ನ ಸೆರಗನ್ನೇ ಹರಿದು ಗಂಟು ಕಟ್ಟಿ ಕೆಳಗೆ ಎಸೆದಿರುತ್ತಾಳೆ. ಆ ಆಭರಣಗಳನ್ನು ನೋಡಿ ರಾಮನು, 'ಲಕ್ಷ್ಮಣಾ ಇದು ಸೀತೆಯ ಕಂಠೀ ಹಾರವಲ್ಲವೇ? ಇದು ಅವಳ ಕಿವಿಯ ಓಲೆಯಲ್ಲವೇ?' ಎಂದು ಪ್ರತಿಯೊಂದು ಆಭರಣವ ತೋರಿಸಿ ತೋರಿಸಿ ಕೇಳುತ್ತಿದ್ದಾಗ ಲಕ್ಷ್ಮಣ ಸುಮ್ಮನೇ ನಿಂತಿದ್ದ. ಕೊನೆಗೆ ಕಾಲುಂಗುರವನ್ನು ತೋರಿಸಿದಾಗ 'ಹೌದು ಅಣ್ಣ, ಇದು ಸೀತಾ ಮಾತೆಯದೇ... ನಾನು ಪ್ರತಿ ದಿನ ಬೆಳಿಗ್ಗೆ ಮಾತೆಯ ಕಾಲಿಗೆ ನಮಸ್ಕರಿಸುವಾಗ ಅದೊಂದನ್ನೇ ನೋಡಿದ್ದು... ಬೇರೆ ಯಾವ ಆಭರಣವನ್ನೂ ನಾನು ನೋಡಿಲ್ಲ' ಎಂದ. ಲಕ್ಷ್ಮಣ ಸೀತೆಯನ್ನು ಎಂಥ ಭಾವ- ಭಕ್ತಿಯಿಂದ ಆರಾಧಿಸುತ್ತಿದ್ದ ಎಂಬುದನ್ನು ಈ ಘಟನೆಯಲ್ಲಿ ಕಾಣಬಹುದು. ಇಂತಹ ನೂರಾರು ಆದರ್ಶಗಳನ್ನು ನಮ್ಮ ರಾಮಾಯಣ ಮಹಾಭಾರತದಲ್ಲಿ ಕಾಣಬಹುದು.
-ನವಿಲೂರು ಪ್ರಕಾಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.