ಅದು ಮಧ್ಯರಾತ್ರಿ. ಅಪರಿಚಿತ ಸಾಹಿತಿಯೊಬ್ಬರು ಲೈಬ್ರರಿಯನ್‌ಗೆ ಫೋನು ಮಾಡಿ ಕೇಳಿದರು, 'ಬೆಳಗ್ಗೆ ಎಷ್ಟು ಗಂಟೆಗೆ ಲೈಬ್ರರಿ ಓಪನ್ ಮಾಡ್ತೀರಾ?'. ಲೈಬ್ರರಿಯನ್‌ಗೆ ಕೋಪ ನೆತ್ತಿಗೇರಿತು. ಆದರೂ ಹೇಳಿದ, 'ಬೆಳಗ್ಗೆ 9 ಗಂಟೆಗೆ ಓಪನ್ ಮಾಡ್ತೀವಿ. ಯಾಕೆ ಈ ಮಧ್ಯರಾತ್ರೀಲಿ ಫೋನು ಮಾಡಿ ಕಾಟ ಕೊಡ್ತೀರಾ?'. ಮತ್ತೆ ಸಾಹಿತಿ, '9 ಗಂಟೆಗೇ ತೆಗೆಯೋದಾ? ಅದಕ್ಕೂ ಮುಂಚೆ ತೆಗೆಯೋದೇ ಇಲ್ವಾ?' ಎಂದು ನಿರಾಶೆಯಲ್ಲಿ ಕೇಳಿದರು. 'ಇಲ್ಲಾ ಅಂದ್ರೆ ಇಲ್ಲ. ಅಷ್ಟೊಂದು ಅರ್ಜೆಂಟ್ ಏನ್ರೀ ಆಗ್ಬೇಕಿತ್ತು?'. ಅದಕ್ಕೆ ಸಾಹಿತಿ ಹೇಳಿದರು, 'ಏನಿಲ್ಲ ಲೈಬ್ರರಿಯಿಂದ ನಾನು ಹೊರಗೆ ಬರಬೇಕಿತ್ತು'!