ಅಲ್ಲಿ ರಿಜೆಕ್ಟು, ಇಲ್ಲಿ ಸ್ವೀಕೃತ!

Updated on: 

ಸಾಹಿತಿಗಳಿಗೆ ಆಗೊಂದು ಹುಚ್ಚಿತ್ತು. 'ಪ್ರಜಾವಾಣಿ'ಯಲ್ಲಿ ಕಥೆ ಪ್ರಕಟವಾಗಿಬಿಟ್ಟರೆ ನೋಬೆಲ್ ಬಂದ್ಹಂಗೆ. ಹಾಗೆ ಕನವರಿಸಿದವರಲ್ಲಿ ಬಿ.ಎಲ್. ವೇಣು ಕೂಡ ಒಬ್ಬರು. 1974ರಲ್ಲಿ ಕಥೆ ಬರೆಯುವ ಗೀಳಿಗೆ ಬಿದ್ದ ವೇಣು, 'ಪ್ರಜಾವಾಣಿ'ಗೆ ಮೇಲಿಂದ ಮೇಲೆ ಕಳುಹಿಸಲು ಶುರುಮಾಡಿದ್ರು. ಒಳಮನಸ್ಸಿಗೆ ಗೊತ್ತಿತ್ತು, 'ನನ್ದು ಪ್ರಕಟ ಆಗೋದು ಡೌಟು'.
ಕೆಲವೇ ದಿನಗಳಲ್ಲಿ 'ಪ್ರಜಾವಾಣಿ'ಯಿಂದ ವಿಷಾದ ಪತ್ರ... 'ನಿಮ್ಮ ಕಥೆ ತಿರಸ್ಕೃತ'. ವೇಣು ಕಾಯುತ್ತಿದ್ದುದ್ದೂ ಅದನ್ನೇ. ಹಾಗೆ ತಿರಸ್ಕೃತಗೊಂಡ ಕಥೆಯನ್ನು ಕೂಡಲೇ 'ಕನ್ನಡಪ್ರಭ'ಕ್ಕೆ ಕಳುಹಿಸುತ್ತಿದ್ದರಂತೆ. ಆಗಲೂ ಅವರ ಒಳಮನಸ್ಸು ಹೇಳುತ್ತಿತ್ತು, 'ಕಥೆ ಖಂಡಿತಾ ಪ್ರಕಟ ಆಗುತ್ತೆ'.
ಹ್ಹಹ್ಹಹ್ಹ! ಕೆಲವೇ ದಿನಗಳಲ್ಲಿ ಆ ಕಥೆ ಪ್ರಕಟವಾಗುತ್ತಿತ್ತು.
1976ರಲ್ಲಿ 'ನನ್ನತನ ಕುಗ್ಗಿದಾಗ' ಕಥೆ ಪ್ರಕಟವಾಗಿದ್ದು ಅವರಿಗೇ ಗೊತ್ತಿರ್ಲಿಲ್ವಂತೆ. ಆಪ್ತಮಿತ್ರ ಶರಭಣ್ಣನ ಮನೇಲಿ ಕಾಫಿ ('ಶರಾಬು' ಎಂದು ತಿರುಚಬೇಡಿ) ಕುಡಿಯುತ್ತಿದ್ದಾಗ ಸರೋಜಮ್ಮ ಎಂಬವರು, 'ಇದೇನೋ ನಿನ್ನ ಹೆಸ್ರು ಪೇಪರ್ನಾಗೆ ಬಂದೈತಿ!' ಎಂದು ಸಾಪ್ತಾಹಿಕ ಪ್ರಭ ಮುಂದೆ ಮಾಡಿದರಂತೆ. ಕಥೆ ಕಳುಹಿಸಿದ್ದ ವೇಣು ಕಂಗಾಲು!
ಕಥೆಯನ್ನು ಒಬ್ಬೊಬ್ಬರು ಒಂದೊಂದು ದೃಷ್ಟಿಯಲ್ಲಿ ನೋಡುತ್ತಾರೆ. ಒಬ್ಬರಿಗೆ ಹಿಡಿಸಬಹುದು. ಇನ್ನೊಬ್ಬರು ತಿರಸ್ಕರಿಸಬಹುದು. ಆದರೆ, ಕಥೆಗಾರ ಪ್ರಯತ್ನ ಬಿಡಬಾರದು. ಬಿ.ಎಲ್. ವೇಣು ಇದಕ್ಕೆ ತಾಜಾ ಉದಾಹರಣೆ. ಅವರ 'ಲೋಕದಲ್ಲಿ ಜನಿಸಿದಾ ಬಳಿಕ' ಆತ್ಮಕಥನ ಇದನ್ನೆಲ್ಲ ತೆರೆದಿಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com