

ನನಗೂ ಕೂಡ ಅಷ್ಟೇ ಮಧು... ಜೊತೇಲಿದ್ದ ನಿನ್ನನ್ನು ಇನ್ನೊಂದು ಹುಡ್ಗೀ ಜೊತೆ ಹಂಚಿಕೊಳ್ಳೇಕೆ ಇಷ್ಟ ಆಗ್ತ ಇಲ್ಲ. ಈ ಪತ್ರ ನೀನು ಓದುವ ಮೊದ್ಲೇನೇ ನಾನು ಈ ಲೋಕ ಬಿಟ್ಟು ಹೋದ್ರೆ ನೀನೇ ಆಶ್ಚರ್ಯ ಪಡಬೇಕಿಲ್ಲ. ನನ್ನಂತಹ ಹುಡ್ಗೀರು ಫಸ್ಟ್ ಆಫ್ ಆಲ್ ಪ್ರೀತಿ ಮಾಡೋದೇ ತಪ್ಪು. ಅದರಲ್ಲೂ ನಿನ್ನಂತಹ ಅಂಡೆಪಿರ್ಕಿಗಳನ್ನು ಲವ್ ಮಾಡ್ತೀವಲ್ಲ, ನಮ್ಮನ್ನು ಓಡಿಸ್ಕೊಂಡು ಹೋಗಬೇಕು...
ಲೇ ಮಧು... ಕೋತಿ ನನ್ಮಗನೇ... ನೀನೇನು ದೊಡ್ಡ ಹೀರೋನಾ...? ನನ್ನ ಮನಸ್ಸಿನ ಜೊತೆ, ನನ್ನ ಭಾವನೆಗಳ ಜೊತೆ ಆಟ ಆಡ್ಲಿಕ್ಕೆ ನಿನಗೇನು ಅಧಿಕಾರವಿದೆ?
ನೀನು ಬೇರೆಯ ಹುಡ್ಗೀನ ಮದ್ವೆ ಆಗೋದೆ ಆಗಿದ್ರೆ ನನ್ನ ಜೊತೆ ಇಷ್ಟೊಂದು ಸುಳ್ಳು ಹೇಳಿಕೊಂಡು... ನಾಟಕ ಆಡಿಕೊಂಡು... ಪ್ರತೀ ಕ್ಷಣ ಕೂಡ ನಂಗೆ ಪ್ರೀತೀನ ಕೊಟ್ಕೊಂಡು ಬಂದಿಯಲ್ಲ... ಓಕೆ... ಓಕೆ... ಸಾರಿ... ನಾನೇ ಮರೆತುಬಿಟ್ಟೆ... ಆ ದಿನ ನಾನು ಮನೆಯಿಂದ ಮೆಜೆಸ್ಟಿಕ್ಗೆ ಬಂದು, ಶೃಂಗೇರಿಗೆ ಹೋಗ್ಬೇಕು ಅಂತ ಇದ್ದೇನಲ್ಲ... ಆ ದಿನ ಬಸ್ ಸ್ಟಾಪಲ್ಲಿ ಎಲ್ಲರೂ ನಿನ್ನಂತಹ ಹೈಫೈ ಇಂಗ್ಲಿಷ್ ಮಾತಾಡೋರೇ ಕಣೋ... ಆದ್ರೆ ಒಂದ್ ಹುಡ್ಗಿ ಬಸ್ ಸ್ಟಾಪಲ್ಲಿ ಅಷ್ಟೊತ್ತಲ್ಲಿ ಕೂತ್ಕೊಂಡಿದ್ರೆ ಎಲ್ಲೂ ಲೋಕಲ್ಲೇ... ನೀವು ಹುಡ್ಗೀರ್ನ ಎಷ್ಟು ಚೆನ್ನಾಗಿ ನೋಡ್ತಿರಪ್ಪ...! ನಮಗೆ ಗೊತ್ತಿರಲಿ ನಮ್ಮ ಸೈಜ್ ಏನಂತ... ಆದರೆ ನೀವು ಎಷ್ಟು ಚೆನ್ನಾಗಿ ಅಳತೆ ಮಾಡ್ತೀರಪ್ಪ... ನೀವು ನಮ್ಮ ಇಡೀ ಬಾಡಿ ಸೈಜ್ನ ಅಳತೆ ಮಾಡಿ ತೂಕ ಹಾಕಿಬಿಡ್ತೀರ...! ನಿನಗೂ ಅವರಿಗೂ ತುಂಬಾ ವ್ಯತ್ಯಾಸ ಇರ್ಬಹುದು. ಕೊನೆಗೂ ನೀನು ಬಂದು ನನ್ನನ್ನು ಮನೆಗೆ ಕರ್ಕೊಂಡು ಹೋಗು... ನೀನು ಹೀಗೆ ಮಾಡ್ತೀಯಂತ ಗೊತ್ತಿದೆ. ನಾನು ಆ ದಿನ ನಿನ್ನ ಜೊತೆ ಬರ್ತಾನೇ ಇರ್ತಿರ್ಲಿಲ್ಲ ಕಣೊ...
ನಂಗೊತ್ತು... ನೀನು ತುಂಬಾ ಒಳ್ಳೆಯವನು... ನಿನ್ನ ಪ್ರೀತಿ, ನಿನ್ನ ಮನಸ್ಸು ಎಲ್ಲ ನನಗೆ ಇಷ್ಟ ಆಗಿಯೂ... ನೀನು ನನ್ನ ಮದ್ವೆ ಆಗ್ತೀನಂತ ಹೇಳಿದ್ರೂ... ನನಗೆ ಮದ್ವೆ ಆಗ್ಲಿಕ್ಕೆ ಆಗಲ್ಲ. ಯಾಕಂದ್ರೆ ನಮ್ಮ ಮಧ್ಯೆ ಒಂದು ದೊಡ್ಡ ಗೋಡೇನೇ ಇದೆ. ನೀನು ಕೂಡ ನಾನು ಹೇಳಿದ ನನ್ನ ಸ್ನೇಹಿತೆಯನ್ನೇ ಮದ್ವೆ ಆಗಲು ಹೊರಟಿದ್ದೀಯಾ...!
ನಂಗೂ ಆಸೆ ಇದೆ ಕಣೋ... ನನ್ನ ಜೀವನ ಅಂತೂ ಮುಗಿದು ಹೋಗಿದೆ. ನನ್ನದೊಂದು ಮುಗಿಯದ ಕಥೆ. ನೀನಾದ್ರೂ ಮದ್ವೆ ಆಗಿ ಒಳ್ಳೆ ರೀತಿಯಿಂದ ನಿನ್ನ ಜೀವನ ನಡೆಸಬೇಕು. ನೀನು ನಿನ್ನ ಸಂಸಾರದೊಂದಿಗೆ, ಸುಖದಿಂದ, ಸಂತೋಷವಾಗಿ ಬಾಳಿ ಬದುಕಬೇಕು. ನಾನು ಕೂಡ ನಿನ್ನನ್ನು ಜೀವನಪೂರ್ತಿ ಪ್ರೀತಿಸುತ್ತಲೇ ಇರಬೇಕು ಅಂತ... ಆದ್ರೆ ನಾನೇನ್ಮಾಡ್ಲಿ...? ಪ್ರೀತಿ ಕೊಟ್ಟಷ್ಟೂ ಬೇಡುತ್ತೆ. ಹಾಗೆಯೇ ನೀನು ಮದ್ವೆ ಆದ ನಂತರ ಎಲ್ಲಿ ನನ್ನನ್ನು ಮರೆತು ಬಿಡ್ತಿಯೋ... ದೂರ ಮಾಡಿಬಿಡ್ತೀಯೋ ಎಂಬ ಭಯ ಕ್ಷಣ ಕ್ಷಣಕ್ಕೂ ಕಾಡುತ್ತೆ... ನಂಗೊತ್ತು ನೀನು ನನ್ನನ್ನು ತುಂಬಾ ಪ್ರೀತಿಸ್ತೀಯ. ಅಭಿಮಾನದಿಂದ ನೋಡ್ತೀಯ. ದೂರ ಮಾಡಲಿ ಅಂತ. ಆದ್ರೆ ನಾನೇನ್ಮಾಡ್ಲಿ...? ಇದೆಲ್ಲ ನನ್ನ ಮೆದುಳಿಗೆ ಅರ್ಥ ಆಗುತ್ತೆ. ನನ್ನ ಮನಸ್ಸಿಗೆ ಅರ್ಥ ಆಗಲ್ಲ. ಈ ಪತ್ರ ನೀನು ಓದುವುದರೊಳಗೆ ನಾನು ಬದುಕಿರ್ತೀನೋ ಇಲ್ಲವೋ... ನಂಗೊತ್ತಿಲ್ಲ... ಆದ್ರೆ ನಿನಗೋಸ್ಕರವೇ ನಾನು ಬದುಕಿರಲು ಆದಷ್ಟು ಪ್ರಯತ್ನ ಮಾಡ್ತೀನಿ ಕಣೋ...
-ಐಶು