ನ್ಯಾಯಾಲಯದಲ್ಲಿ ವಾದ-ಪ್ರತಿವಾದ ನಡೆಯುತ್ತಿತ್ತು, ವಾದಿಯ ಪರ ವಕೀಲರು ವಾದ ಮಂಡಿಸುತ್ತಿದ್ದರು... ವಾದ ಆಲಿಸಿದ ನ್ಯಾಯಾಧೀಶರು "ನೀವು ಹೇಳ್ತಿರೋದು ಸರಿ" ಎನ್ನುತ್ತಿದ್ದರು.
ಪ್ರತಿವಾದಿಯ ಪರ ವಕೀಲರು ನಂತರ ವಾದ ಮಾಡತೊಡಗಿದರು. ಪ್ರತಿವಾದಿ ಪರ ವಕೀಲರ ಪ್ರತಿವಾದ ಆಲಿಸಿದ ನ್ಯಾಯಾಧೀಶರು "ನೀವು ಹೇಳೋದೂ ಸರಿ ಬಿಡಿ" ಎಂದರು.
ಇದನ್ನೆಲ್ಲಾ ನೋಡುತ್ತಿದ್ದ ಹಿರಿಯ ವಕೀಲರೊಬ್ಬರು ಮಧ್ಯೆ ಬಾಯಿ ಹಾಕಿ ಹೇಳಿದರು "ಏನು ಸ್ವಾಮಿ ನೀವು... ಆ ವಕೀಲರು ಹೇಳೋದೂ ಸರಿ ಅಂತೀರಾ... ಈ ವಕೀಲರು ಹೇಳ್ತಿರೋದೂ ಸರಿ ಅಂತೀರಾ?
ನ್ಯಾಯಾಧೀಶರು ಹೇಳಿದರು... "ಒಂದು ರೀತಿಯಲ್ಲಿ ನೀವು ಹೇಳ್ತಿರೋದೂ ಸರಿ ಬಿಡಿ!"
-ಪಿ.ಜೆ. ರಾಘವೇಂದ್ರ, ನ್ಯಾಯವಾದಿ