ಜನವರಿ 26 1950 ನಮ್ಮ ದೇಶ ಸಂವಿಧಾನ ಅಂಗೀಕರಿಸಿ ಗಣರಾಜ್ಯವಾದ ಸುಸಂದರ್ಭ. ನಮ್ಮ ದೇಶದ ಇತಿಹಾಸವನ್ನು ಅವಲೋಕನ ಮಾಡಿದಾಗ ಜನವರಿ 26 ರಂದು ಕೆಲವು ಪ್ರಮುಖ ಘಟನೆಗಳು ಜರುಗಿರುವುದು ಕಂಡುಬರುತ್ತದೆ. ಅವುಗಳಲ್ಲಿ ಕೆಲವನ್ನು ಸಂಗ್ರಹಿಸಿ ಕೊಡಲಾಗಿದೆ.
26 ಜನವರಿ 1164 ರಂದು ರಾಜಾ ಬಿಸಲದೇವ ದೆಹಲಿಯನ್ನು ಗೆದ್ದುಕೊಂಡನು
26 ಜನವರಿ 1175 ರಂದು ಮಹಮದ್ ಗೋರಿ ಮುಲ್ತಾನನ್ನು ವಶಪಡಿಸಿಕೊಂಡನು
26 ಜನವರಿ 1299 ರಂದು ಅಲ್ಲಾವುದ್ದೀನ್ ಖಿಲ್ಜಿ ರಣಧಂಚಾರ ಕೋಟೆ ಮುತ್ತಿಗೆ ಹಾಕಿದ ದಿನ
26 ಜನವರಿ 1835 ರಂದು ಆಂಗ್ಲರು ಮೊದಲ ಬಾರಿ ಪತ್ರಿಕಾ ಸ್ವಾತಂತ್ರ್ಯ ನೀಡಿದ ದಿನ
26 ಜನವರಿ 1853 ರಂದು ಭಾರತದಲ್ಲಿ ಪ್ರಥಮ ಬಾರಿಗೆ ರೈಲು ವ್ಯವಸ್ಥೆ ಜಾರಿಗೆ ಬಂತು.
26 ಜನವರಿ 1862 ರಂದು ಮುಂಬೈನಲ್ಲಿ ಹೈಕೋರ್ಟ್ ಸ್ಥಾಪನೆ
26 ಜನವರಿ 1876 ರಂದು ಕಲ್ಕತ್ತೆಯಿಂದ ಮುಂಬೈಗೆ ಮೊದಲ ರೈಲು ಸಂಚಾರ
26 ಜನವರಿ 1930 ರಂದು ಮೈಸೂರು ಸಂಸ್ಥಾನದ ಶಿವಪುರದಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಅದರಲ್ಲಿ ಭಾಗವಹಿಸಿದ ನ್ಯಾಯವಾದಿಗಳಾಗಿದ್ದ ಹೆಚ್.ಸಿ.ದಾಸಪ್ಪ ಹಾಗೂ ಎಸ್.ನಿಜಲಿಂಗಪ್ಪ ರವರ ವಕೀಲಿ ಸನ್ನದು ಮುಟ್ಟುಗೋಲು ಹಾಕಿ ಕೊಳ್ಳಲಾಯಿತು.
26 ಜನವರಿ 1969 ಮದ್ರಾಸ ರಾಜ್ಯದ ಹೆಸರು 'ತಮಿಳುನಾಡು' ಎಂದು ಬದಲಾಯಿಸಿದ ದಿನ
(ವಿವಿಧ ಮೂಲಗಳಿಂದ ಸಂಗ್ರಹಿತ)
- ಬಸವರಾಜ ಹುಡೇದಗಡ್ಡಿ