1.
ಮನದಲ್ಲಿ ಗುರಿ ಸ್ವರ್ಗವಿರಲಿ
ಮಾರ್ಗದಲ್ಲಿ ಸದಾ ನಗುವಿರಲಿ,
ಕೆಲವೊಮ್ಮೆ
ಗುರಿಗಿಂತ ದಾರಿಯೇ ಸುಂದರ
ಗುಡಿಗಿಂತ ಮನೆಯೇ ಮಂದಿರ...
3.
ಪ್ರಯತ್ನಿಸಿ ನೋಡು
ನನ್ನ ಮರೆಯಲು
ಏಕಾಂಗಿಯಾಗಿ ಬಿಡುವೆ
ರಾತ್ರಿ ಹಗಲು;
ನೆನೆದು ನೋಡು ಆಪ್ತರ
ನೋವ ಮರೆಯಲು,
ನುಗ್ಗಿ ಬಂದು ನಿಲ್ಲುವೆ
ಎಲ್ಲರಿಗಿಂತ ನಾನೇ ಮೊದಲು
2.
ಕತ್ತಲ ಅನುಭವಕೆ
ಕಣ್ಣು ಮುಚ್ಚಿದರೆ ಸಾಕು
ಕತ್ತಲಾಗಬೇಕೆಂದಿಲ್ಲ;
ಬೆತ್ತಲ ಅನುಭವಕೆ
ಮಾನ ಹೋದರೂ ಸಾಕು
ಬಟ್ಟೆ ಕಳಚಬೇಕೆಂದಿಲ್ಲ...
4.
ಯಾರು
ಯಾರಿಗೂ ಕಾಯುವುದಿಲ್ಲ
ಮುನ್ನುಗ್ಗುವಾಗ,
ಯಾರೂ ಹೊರುವುದಿಲ್ಲ
ಜೀವನವಿಡೀ ಯಾರದೂ ಭಾರ
ಶವಯಾತ್ರೆಯಲ್ಲೂ ಕೂಡ
ಹೆಗಲು ಬದಲಿಸುವರು ಆಗಾಗ...