ದೇವಭಾಷೆ ಸಂಸ್ಕೃತ ಕಡೇಪಕ್ಷ ಮಾನವಭಾಷೆಯಾಗುಳಿದರೂ ಸಾಕು. ಸಂಸ್ಕೃತ ಕಲಿಯಬೇಕು ಅನ್ನೋರಿಗೆ 'ಹೋಗಿ ಮಠ ಸೇರ್ಕೋ' ಎಂಬ ಬಿಟ್ಟಿ ಉಪದೇಶವೂ ಸಿಗುವ ಈ ಕಾಲದಲ್ಲಿ ಬಿಹಾರದ ಸದಾನಂದ ಝಾ, 'ಜಾಹ್ನವಿ' ಎಂಬ ಸಂಸ್ಕೃತ ಆನ್‌ಲೈನ್ ಪತ್ರಿಕೆಯನ್ನು ಹೊರತಂದು ದೇವಭಾಷೆಯನ್ನು ಸರ್ವರಿಗೂ ಮುಟ್ಟಿಸಲೆತ್ನಿಸುತ್ತಿದ್ದಾರೆ. ಖುಷಿಪಡುವ ವಿಚಾರವೆಂದರೆ ಈ ಸಂಪಾದಕೀಯ ತಂಡದಲ್ಲಿ ಕನ್ನಡಿಗ ವಿದ್ವಾನ್ ಸುಮನ್ ಆಚಾರ್ಯರೂ ಇದ್ದಾರೆನ್ನುವುದು. ಈ 'ಇ- ತ್ರೈಮಾಸಿಕ'ಕ್ಕೆ ನೀವೇನು ಹಣ ಕೊಡಬೇಕಾದ್ದಿಲ್ಲ. www.jahnavisanskritejournal.com ಜಾಲತಾಣಕ್ಕೆ ಭೇಟಿ ಕೊಟ್ಟರೆ ಸಾಕು. ಸಂಸ್ಕೃತ ಕಲಿಯಲು ಇದೊಂದು ಪುಟ್ಟಶಾಲೆ.