ಮೇಷ್ಟು : ನಿಂಗಾ, ಎಲ್ಲಾ ಪರೀಕ್ಷೆಗಳನ್ನು ಡೇ ಟೈಮಲ್ಲೇ ಯಾಕೆ ಇಡ್ತಾರೆ...?
ನಿಂಗ : ರಾತ್ರಿ ಇಟ್ರೆ ಕರೆಂಟ್ ಕೈ ಕೊಡಬಹುದು ಅಂತ.
-
ಮಮ್ಮಿ : ಯಾಕೋ ನಿಂಗ, ನಿನ್ನ ಚಡ್ಡಿ, ಹಾಸಿಗೆ ಎಲ್ಲಾ ಒದ್ದೆಯಾಗಿದೆ ?
ನಿಂಗ : ರಾತ್ರಿ ಕನಸಿನಲ್ಲಿ ಸಿಂಹ ಓಡಿಸಿಕೊಂಡು ಬಂತಮ್ಮಾ! ತಕ್ಷಣ ನೀರಿಗೆ ಬಿದ್ದುಬಿಟ್ಟೆ. ಅದಕ್ಕೇ ಎಲ್ಲಾನೂ ಒದ್ದೆಯಾಗಿದೆ.
-
'ನಾನು ನಿನ್ನ ಬಿಟ್ಟು ಬೇರಾರನ್ನೂ ಪ್ರೀತಿಸಲಿಲ್ಲವೆಂದು ಸುಳ್ಳು ಹೇಳಿ ಮದ್ವೆಯಾದೆ ಪುಟ್ಟಿ... ಸಾರಿ... ಕಣೆ...'
'ನನ್ನನ್ನೂ ನೀವು ಕ್ಷಮಿಸಬೇಕು !
ಯಾಕೆ ?'
'ನಾನು ಪೂಜಾರಿಗೆ ಡೈವೋರ್ಸ್ ಕೊಟ್ಟಿದ್ದನ್ನು ನಿಮ್ಮಲ್ಲಿ ಹೇಳಲಿಲ್ಲ ಅದಕ್ಕೆ !.'
- ಜ್ಞಾನಮೂರ್ತಿ