ಗುಂಡ: ಆ ರೌಡಿಯಿಂದ ನನ್ನ ಮತ್ತು ನಮ್ಮ ಏರಿಯಾದ ನೆಮ್ಮದಿ ಹಾಳಾಗಿ ಹೋಗಿದೆ. ಏನು ಮಾಡಬೇಕೆಂದು ಗೊತ್ತಾಗ್ತಾ ಇಲ್ಲ.
ತಿಮ್ಮ: ಅದು ಸಿಂಪಲ್ ಕಣೋ. ಯಾಕೋ ತಲೆ ಕೆಡಿಸ್ಕೋತೀಯಾ?
ಗುಂಡ: ಏನು ಮಾಡ್ಬೇಕು?
ತಿಮ್ಮ: ನೀವು ಏರಿಯಾದ ಜನರೆಲ್ಲ ಸೇರಿ ಅವನನ್ನ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿ ಎಂಎಲ್ಎ ಮಾಡಿ.
ಗುಂಡ: ಎಂಎಲ್ಎ ಮಾಡಿದ್ರೆ?
ತಿಮ್ಮ: ಐದು ವರ್ಷ ಅವನು ನಿಮ್ಮ ಏರಿಯಾ ಕಡೆ ತಲೆ ಹಾಕಲ್ಲ.
----
ಗುಂಡಿ: ರಾತ್ರಿ ನಿದ್ದೆಗಣ್ಣಿನಲ್ಲಿ ನನ್ನ ಗಂಡ ತುಂಬಾ ಮಾತಾಡುತ್ತಾರೆ. ಏನು ಮಾಡೋದು. ಏನಾದರೂ ಗುಳಿಗೆ ಕೊಡಿ,
ಡಾಕ್ಟರ್: ಗುಳಿಗೆಯ ಅವಶ್ಯಕತೆಯಿಲ್ಲ.
ಗುಂಡಿ: ಮತ್ತೆ ಹೇಗೆ ಇದನ್ನು ಸರಿಪಡಿಸುವುದು?
ಡಾಕ್ಟರ್: ಬೆಳಿಗ್ಗೆ ಹೊತ್ತು ನೀವು ಅವರಿಗೆ ಮಾತನಾಡಲು ಅವಕಾಶ ನೀಡಬೇಕು.
--
ಮಂತ್ರವಾದಿ: ಭಕ್ತಾ... ನಾನು ಕೊಟ್ಟ ತಾಯಿತ ಹೇಗಿದೆ?
ಗುಂಡ: ಸ್ವಾಮಿ... ಹೆಂಡತಿ ನನ್ನನ್ನು ಪ್ರೀತಿಸುವ ಬದಲು ಪಕ್ಕದ ಮನೆಯವಳು ಪ್ರೀತಿಸುತ್ತಾ ಇದ್ದಾಳೆ.
ಮಂತ್ರವಾದಿ: ಓಹೋ... ಎಲ್ಲೋ ಸೈಡ್ ಎಫೆಕ್ಟ್ ಆಗಿರಬೇಕು.
----
25 ವರ್ಷಗಳ ನಂತರ ಮಾಧ್ಯಮದಲ್ಲಿ ಈ ರೀತಿಯ ಬ್ರೇಕಿಂಗ್ ನ್ಯೂಸ್ ಬಂದರೆ ಹೇಗಿರುತ್ತೆ? ತಕ್ಷಣದಿಂದಲೇ ಪೆಟ್ರೋಲ್ ಬೆಲೆಯನ್ನು ಹೆಚ್ಚಿಸಿ ಸಚಿವಾಲಯ ಆದೇಶ ಹೊರಡಿಸಿದೆ. ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ 25 ಹನಿ ಪೆಟ್ರೋಲ್ ಬೆಲೆ ರುಪಾಯಿ 25ಕ್ಕೆ ಏರಿದೆ.