ಪ್ರೀತಿಗೆ ಬೇಕಿರುವುದು
ಸಿರಿವಂತಿಕೆಯಲ್ಲ
ಹೃದಯಗಳ ಒಪ್ಪಿಗೆ
ಮತ್ತು
ಮನಸುಗಳ ಬೆಸುಗೆ
ನಾನು ಕನಸುಗಳ
ಸಂಪತ್ತಿನ ಒಡೆಯ
ಒಲವಿನ ಸುಪ್ಪತ್ತಿಗೆಯ
ಮೇಲೆ
ಸದಾ ನಿನ್ನ ಮುದ್ದಾಡುವೆ !
ನಿನ್ನ ಹೊರತು ಮತ್ತಾರೂ
ಹೆಜ್ಜೆಯೂರದಂತೆ
ಕಾವಲು ಕಾಯುವೆ
ನಿನ್ನ ನೆನಪುಗಳನ್ನ!
ನಾನು ನನ್ನದೇ
ಗೋರಿಯೊಳಗೆ
ಮಲಗಿದ್ದರೂ
ಬರಮಾಡಿಕೊಳ್ಳ ಬಲ್ಲೆ
ನಿನ್ನ ಕನಸುಗಳನ್ನ !
-ನವೀನ್ ಮಧುಗಿರಿ