72ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಡಾ. ಶಾಂತರಸ ಲೇಖಕಿಯರ ಪ್ರಶಸ್ತಿಗೆ ಪುಸ್ತಕಗಳನ್ನು ಆಹ್ವಾನಿಸಿದ್ದಾರೆ. ಅವರ ಪತ್ನಿ ದಿ. ಲಕ್ಷ್ಮೀದೇವಿ ಹೆಸರಿನಲ್ಲಿ 1.50 ಲಕ್ಷ ರು.ನ ದತ್ತಿನಿಧಿ ಸ್ಥಾಪಿಸಲಾಗಿದೆ. ಈ ಪ್ರಶಸ್ತಿ 5,000 ರು. ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ. 2011- 12ನೇ ಸಾಲಿನ ಸಂಕೀರ್ಣ ಪ್ರಕಾರಕ್ಕೆ ಈ ಪ್ರಶಸ್ತಿಯನ್ನು ನೀಡಲಾಗುವುದು. ಜೂನ್ 30, ಪುಸ್ತಕಗಳನ್ನ ತಲುಪಿಸಲು ಕೊನೆಯ ದಿನ.
ವಿಳಾಸ: ಕನ್ನಡ ಸಾಹಿತ್ಯ ಪರಿಷತ್, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು.
ದೂರವಾಣಿ: 080- 26623584.