ಕ್ರೈಮ್ ಥ್ರಿಲ್ಲರ್ಗಳಿಂದಲೇ ಮನೆಮಾತಾದ ಬ್ರಿಟಿಷ್ ಲೇಖಕಿ ಅಗಾಥಾ ಕ್ರಿಸ್ಟೀ ಹಲವು ವಿಸ್ಮಯಗಳ ಮೂಟೆ. 66 ಪತ್ತೇದಾರಿ ಕಾದಂಬರಿ, 'ಮೇರಿ ವೆಸ್ಟ್ಮಕಾಟ್' ಹೆಸರಿನಲ್ಲಿ ಅವಳೇ ಗೀಚಿದ ಹತ್ತಾರು ರೋಮ್ಯಾಂಟಿಕ್ ಕಥೆಗಳು ಇಂದಿಗೂ ಹೊಸ ಓದಿನ ಅನುಭವ ತಂದುಕೊಡುತ್ತವೆ. ಬಾತ್ ಟಬ್ನಲ್ಲಿ ಬೆತ್ತಲೆ ಕೂತು ಕಥೆ ಬರೆಯೋದರಲ್ಲೇ ಅವಳಿಗೇನೋ ನೆಮ್ಮದಿ ಸಿಗುತ್ತಿತ್ತಂತೆ.
ಹಾಗಾದರೆ ಕ್ರಿಸ್ಟಿ ಸಂಪೂರ್ಣವಾಗಿ ನೆಮ್ಮದಿ ಕಳೆದುಕೊಂಡಿದ್ದಳೇ?
ಕಳೆದುಕೊಂಡಿದ್ದಳು. ಕ್ರಿಸ್ಟೀ ಸ್ಫುರದ್ರೂಪಿ ಲೇಖಕಿಯೇನೋ ಹೌದು. ಅವಳ ಮಾದಕ ರೂಪಕ್ಕೆ ಮಾರುಹೋದ ಘಟಾನುಘಟಿಗಳ ಪಟ್ಟಿಯೇ ದೊಡ್ಡದಿದೆ. ಆದರೆ, ಆಕೆಯ ದೇಹಸಿರಿ ಅವಳ ಗಂಡನನ್ನು ಆಕರ್ಷಿಸಲು ಸೋತಿತ್ತು ಎನ್ನುವುದು ಹೇಳಲೇಬೇಕಾದ ಬೇಸರದ ಸಂಗತಿ. ಗಂಡ ಆರ್ಚೀ, ಅಗಾಥಾಳ ದೇಹಸುಖ ಬಯಸದೆ ನ್ಯಾನ್ಸಿ ನೀಲ್ ಎಂಬ ಸುಂದರಿಯ ಸಹವಾಸಕ್ಕೆ ಬಿದ್ದಿದ್ದ. ಅಗಾಥಾ ತನ್ನ ಅಂದ ಹೆಚ್ಚಿಸಿಕೊಳ್ಳಲಿಕ್ಕೇ ಏನೇನೋ ಕಸರತ್ತು ನಡೆಸಿದಳು. ಆದರೆ, ಆರ್ಚೀ ಮಾತ್ರ ಇವಳತ್ತ ಇಣುಕಿಯೂ ನೋಡಿರಲಿಲ್ಲ.
ಒಂದು ದಿನ ಅಗಾಥಾ ಸುಳಿವೇ ಸಿಗದಂತೆ ಬೆರ್ಕ್ಶೈರ್ ಮನೆಯಿಂದ ನಾಪತ್ತೆಯಾದಳು. ಆ ವೇಳೆ ಆಕೆಯ ಪ್ರಸಿದ್ಧ ಡಿಟೆಕ್ಟಿವ್ ಫಿಕ್ಷನ್ 'ಝಿಜ ಂ್ಡ್ಠಜಜ್ಠ ್ಟಜಿ ಖ್ಟ್ಜಜ್ಠ ಆ್ಛ್ಞ್ಠ್ಟಣಜ' ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಲ್ಲಿತ್ತು. ಪತಿ ಸೇರಿದಂತೆ ಗೆಳೆಯರೆಲ್ಲ ಎಲ್ಲಿ ಹುಡುಕಿದರೂ ಅಗಾಥಾ ಕಾಣಲೇ ಇಲ್ಲ. ಮರುದಿನದ ಪತ್ರಿಕೆಗಳೆಲ್ಲ 'ಕಾದಂಬರಿಗಾರ್ತಿಯ ನಿಧನ' ಎಂಬ ಹೆಡ್ಲೈನ್ನಲ್ಲಿ ಸಂಚಿಕೆಯನ್ನು ಮಾರುಕಟ್ಟೆಗೆ ದಾಟಿಸಿದ್ದವು.
ಆದರೆ, ಗಂಡ ಆರ್ಚೀ ಮಾತ್ರ ಈ ಸುದ್ದಿಯನ್ನು ಒಪ್ಪಲೇ ಇಲ್ಲ. ಪತ್ನಿಯ ಧೈರ್ಯದ ಬಗ್ಗೆ ಅವನಿಗೇನೋ ನಂಬಿಕೆಯಿತ್ತು. ಮನೆಯ ಶೆಡ್ನಲ್ಲಿ ಕಾರೂ ಇರಲಿಲ್ಲ. ಎಲ್ಲೋ ಲಾಂಗ್ಡ್ರೈವ್ ಹೋಗಿದ್ದಾಳೆ ಎಂದು ಅಂದುಕೊಂಡ. ಆದರೆ, ಮೂರ್ನಾಲ್ಕು ದಿನದ ನಂತರ ಆ ಕಾರುಬೆರ್ಕ್ಶೈರ್ನ ಮನೆಯಿಂದ ಕೆಲವೇ ಮೈಲುಗಳ ದೂರದಲ್ಲಿ ಪ್ರಪಾತಮುಖಿಯಾಗಿತ್ತು. ಅಲ್ಲಿ ಆಕೆಯ ಹರಿದ ಡ್ರೆಸ್ಸಿನ ಚೂರುಗಳು, ರಕ್ತದ ಕಲೆ ಕಂಡಿತು. ಹೆಂಡತಿಯನ್ನು ಯಾರೋ ಕೊಲೆಮಾಡಿದ್ದಾರೆ ಎಂದು ಶಂಕಿಸಿ, ಗಳಗಳನೆ ಅಳತೊಡಿಗದ ಆರ್ಚೀ.
ಆದರೆ, ಕ್ರಿಸ್ಟೀಯೇನು ಸತ್ತಿರಲಿಲ್ಲ. 10 ದಿನಗಳ ನಂತರ ಮತ್ತೆ ಮನೆಗೆ ಬಂದಳು. ಗಂಡನಿಗೆ ಬುದ್ಧಿ ಕಲಿಸಲು ಆಡಿದ ಸಣ್ಣನಾಟಕ ಅದಾಗಿತ್ತು. ಮುಂದೆ ಈಕೆ ಗಂಡನಿಗೆ ಬರೆಯುತ್ತಿದ್ದ ವಿಚಿತ್ರ ಬೆದರಿಕೆ ಪತ್ರಗಳು ಡೈವೋರ್ಸ್ಗೂ ಕಾರಣವಾಯಿತು.
ನಂತರ 1930ರಲ್ಲಿ ಮ್ಯಾಕ್ಸ್ ಮಾಲೊವಾನ್ ಎಂಬಾತನ ಕೈಹಿಡಿದಳು ಕ್ರಿಸ್ಟೀ. ಮುಂದೆ ಮ್ಯಾಕ್ಸ್ ಕೂಡ ಈಕೆಯ ಅನೇಕ ನಾಪತ್ತೆ ಪ್ರಕರಣಗಳನ್ನು ಕಂಡನಂತೆ.
- ಮಿಲೀ