ನಕ್ಷತ್ರಗಳು
ನಗುವಾಗ ಇರುಳು
ನಿದ್ರಿಸುವದಿಲ್ಲ
ಮಳೆ ಹುಯ್ಯಿತು
ಹಿಗ್ಗಿದಳು ಭೂರಮೆ
ನೆಲ ಹಸಿರು
ಹರಿದ ನದಿ
ನಿರಾಸೆ ಮೂಡಿಸದು
ಚಿಗುರು ಹುಲ್ಲು
ದಾಹವೆಂದಿತು
ಗೂಡೊಳಗೆ ಗುಬ್ಬಚ್ಚಿ
ಮೋಡ ನಕ್ಕಿತು.
ಮಧು ತುಂಬಿದ
ಬಟ್ಟಲವಳ ತುಟಿ
ಜೇನು ಮುತ್ತಿವೆ
ನಿನ್ನ ನೆನಪು
ಬಳ್ಳಿಯಲ್ಲಿನ ಹೂವು
ಮನಸು ದುಂಬಿ
ನಿನ್ನ ತುಟಿಯ
ಗೆರೆ ಗೆರೆಗಳಲಿ
ಪ್ರೀತಿಯ ಪಸೆ
ಹರಿವ ನೀರು
ನನ್ನೊಳಗಿನ ಸ್ಫೂರ್ತಿ
ಈಜುವ ಮೀನು
- ಶಿ.ಕಾ. ಬಡಿಗೇರ