ಸಾಮಾನ್ಯವಾಗಿ, ರುಚಿಕಟ್ಟಾದ ಊಟ ಮಾಡಿದ ಮೇಲೆ ಎಲ್ಲರಿಗೂ ನಿದ್ರೆ ಬರುವಂತಾಗುತ್ತದೆ. ಯಾವ ಕೆಲಸ ಮಾಡಲೂ ಮನಸ್ಸು ಬರುವುದಿಲ್ಲ. ನಿದ್ರೆ ಮಾಡಬೇಕೆನಿಸುತ್ತದೆ. ಇದಕ್ಕೆ ಕಾರಣವೇನು ಗೊತ್ತೇ? ಊಟವಾದ ಮೇಲೆ ನಮ್ಮ ಜಠರವು ಕೆಲಸ ಮಾಡಲು ಪ್ರಾರಂಭಿಸುತ್ತದೆ. ಆಗ ಅದಕ್ಕೆ ದೇಹದ ಇತರ ಅಂಗಗಳಿಗಿಂತ ಹೆಚ್ಚಿನ ರಕ್ತದ ಅವಶ್ಯಕತೆ ಉಂಟಾಗುತ್ತದೆ. ಪರಿಣಾಮವಾಗಿ ದೇಹದ ಬೇರೆಲ್ಲೆಡೆಗಳಿಗಿಂತ ಹೆಚ್ಚಿನ ರಕ್ತವು ಜಠರಕ್ಕೆ ಪೂರೈಸಲ್ಪಡುತ್ತದೆ. ಆಗ ಮೆದುಳಿಗೆ ರಕ್ತ ಹರಿಯುವಿಕೆಯ ಪ್ರಮಾಣವು ಕಡಿಮೆಯಾಗುತ್ತದೆ. ಇದರಿಂದಾಗಿ ಮೆದುಳಿನ ಕ್ರಿಯೆ ನಿಧಾನಗೊಳ್ಳುತ್ತದೆ. ಚುರುಕುತನ ಕಡಿಮೆಯಾಗುತ್ತದೆ. ಆಗ ಮಂಪರು ನಿದ್ರೆ ಬರಲು ಶುರುವಾಗುತ್ತದೆ.
- ಅರಳಕುಪ್ಪೆ ಶ್ರೀನಿವಾಸ್