ಗುಂಡ: ಒಂದು ತಿಂಗಳ ನಂತರ ನಾನು ವರದಕ್ಷಿಣೆ ವಿರುದ್ಧ ಬೀದಿಗಿಳಿದು ಉಗ್ರ ಹೋರಾಟ ನಡೆಸುತ್ತೇನೆ.
ತಿಮ್ಮ: ಒಂದು ತಿಂಗಳು ಬಿಟ್ಟು ಯಾಕೆ? ಇಂದಿನಿಂದಲೇ ಶುರು ಮಾಡು.
ಗುಂಡ: ಯಾಕೆಂದರೆ, ಈ ತಿಂಗಳು ನನ್ನ ಮತ್ತು ಅದಾದ ಹತ್ತು ದಿನದಲ್ಲಿ ನನ್ನ ಸಹೋದರನ ಮದುವೆ ಇದೆ.
ಗುಂಡ: ನಾನೇನಾದ್ರೂ ಈ ಜೋಕ್ ನಿನಗೆ ಹೇಳಿದ್ರೆ ನೀನು ನಕ್ಕು ನಕ್ಕು ಸಾಯ್ತೀಯಾ...
ತಿಮ್ಮ: ಏನೋ ಅದು? ಹೇಳೋ...
ಗುಂಡ: ನಾನು ಹೇಳಲ್ಲಪ್ಪಾ!
ತಿಮ್ಮ: ಯಾಕೋ?
ಗುಂಡ: ಯಾಕಂದ್ರೆ ಜೋಕ್ಗಿಂತ ನನಗೆ ನಿನ್ನ ಪ್ರಾಣ ಮುಖ್ಯ ಕಣೋ!
ಗುಂಡ ತನಗೆ ತೊಂದರೆ ಬಂದಾಗಲೆಲ್ಲಾ ಪರ್ಸ್ನಲ್ಲಿರುವ ತನ್ನ ಹೆಂಡತಿಯ ಫೋಟೋ ನೋಡುತ್ತಿದ್ದ. ಅದನ್ನು ಕಂಡು ತಿಮ್ಮನಿಗೆ ಆಶ್ಚರ್ಯ...
ತಿಮ್ಮ: ಸಂಕಟ ಬಂದಾಗಲೆಲ್ಲಾ ವೆಂಕಟರಮಣ ಅಂದಹಾಗೆ ಹೆಂಡತಿ ಫೋಟೋ ತೆಗೆದು ನೋಡುತ್ತೀಯಾ?
ಗುಂಡ: ಈ ತೊಂದರೆಯನ್ನೇ (ಹೆಂಡತಿ) ಎದುರಿಸುತ್ತಿರಬೇಕಾದರೆ ಮುಂದೆ ಯಾವ ತೊಂದರೆ ಬಂದರೂ ಎದುರಿಸಬಹುದು ಬಿಡು ಎಂಬ ನಂಬಿಕೆ ಆ ಫೋಟೋ ನೋಡಿದಾಗೆಲ್ಲ ಬರ್ತದೆ!
ಮೊಬೈಲ್ ಗಾದೆಗಳು
ಮೊಬೈಲ್ಗೆ ಹೆಬ್ಬೆರಳು ಚೆಂದ, ಲ್ಯಾಂಡ್ ಫೋನ್ಗೆ ತೋರು ಬೆರಳು ಚೆಂದ.
ಶಿವಪೂಜೆಯಲ್ಲಿ ಮೊಬೈಲ್ ರಿಂಗಾಯ್ತು!
ಹುಡುಗಿಯರಿಗೆ ಫೋನ್ ಮಾಡಿದೋನಿಗೆ ಕುಡಿಕೆ ಕರೆನ್ಸಿ ಸಾಲದು.
ಕರೆನ್ಸಿ ಇದ್ದಷ್ಟೇ ಕಾಲ್ ಮಾಡು.
ಮಾತಿಗೆ ಮನೆ ಫೋನ್ ಲೇಸು. ಹರಟೆ ಹೊಡೆಯೋಕೆ ಆಫೀಸ್ ಫೋನ್ ಲೇಸು.
'ಬಾರ್ ಎಷ್ಟೊತ್ತಿಗೆ ಓಪನ್ ಆಗುತ್ತೆ?' ಆಗಲೇ ತೀರ್ಥ ಸೇವನೆ ಮಾಡಿದ್ದ ಆಸಾಮಿ ಫೋನ್ನಲ್ಲಿ ಕೇಳಿದ. ಸಂಜೆಗೆ ಸರ್ ಎಂದ ಕ್ಲರ್ಕ್ ಫೋನಿಟ್ಟ. ಇನ್ನೂ ಒಂದು ಗಂಟೆ ಕಳೆದಿಲ್ಲ, ಮತ್ತದೇ ಫೋನು. ಅದೇ ಆಸಾಮಿ. ಅದೇ ಪ್ರಶ್ನೆ. ಆದರೆ ಈ ಬಾರಿ ಧ್ವನಿ ಇನ್ನಷ್ಟು ತೊಡರುತ್ತಿತ್ತು. ಆಗಲೇ ಹೇಳಿದ್ದೆನಲ್ಲಾ ಅದೇ ಟೈಂಗೆ ಎಂದುತ್ತರಿಸಿದ ಕ್ಲರ್ಕ್. ಸ್ವಲ್ಪ ಸಮಯದ ನಂತರ ಮತ್ತೆ ಅವನದೇ ಫೋನು. ಕಷ್ಟ ಪಟ್ಟು ಕೇಳಿದ - ಬಾ...ರ್ ಯ್ಯಾ...ವಾ...ಗ ಓ..ಪ...ನ್ ಆಗುತ್ತೆ?
ಕ್ಲರ್ಕ್: ಸ್ವಾಮೀ, ಯಾಕೆ ಅಷ್ಟೊಂದು ಅವಸರ? ಇನ್ನೊಂದು ಗಂಟೆ ತಡೆದುಕೊಳ್ಳಿ. ಆಮೇಲೆ ಆರಾಮಾಗಿ ಒಳಗೆ ಬರುವಿರಂತೆ...
ಫೋನ್ ಮಾಡಿದ್ದವ: ನಾನು ಬಾರ್ನ ಒಳಗೇ ಇದ್ದೇನೆ...ಇಲ್ಲಿಂದ ಹೊರ ಹೋಗಬೇಕು ಕಣಯ್ಯಾ...!