ಬೈಟುಕಾಫಿ

ಲೈಂಗಿಕ ಕ್ರಿಯೆ ವಿವಾಹದ ರಹದಾರಿ ಅಲ್ಲ

Published On :

ಧರ್ಮೇಚ, ಅರ್ಥೇಚ, ಕಾಮೇಚ, ಮೋಕ್ಷೇಚ, ವಾತಿಚರಾಮಿ ಇದು ದಂಪತಿಗಳು ವಿವಾಹದ ವೇಳೆಯಲ್ಲಿ ತೆಗೆದುಕೊಳ್ಳುವ ನಿರ್ಧಾರ. ಚತುರ್ವಥ ಪುರುಷಾರ್ಥಗಳಾದ (ಸ್ತ್ರೀಯಾರ್ಥಗಳೂ ಹೌದು) ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನು ನಾವಿಬ್ಬರೂ ಜತೆಜತೆಯಾಗಿ ಹಂಚಿಕೊಳ್ಳೋಣ ಎಂಬ ಪ್ರತಿಜ್ಞೆ ಕೈಗೊಳ್ಳುವುದು ವಿವಾಹದ ವೇಳೆಯಲ್ಲಿ. ದಾಂಪತ್ಯ ಜೀವನಕ್ಕೆ ಸಮಾಜವು ಸಮ್ಮತಿ ನೀಡುವ ಸಮಾರಂಭವೇ ವಿವಾಹ. ಹಾಗಿರುವಾಗ, ವಿವಾಹಪೂರ್ವ ಲೈಂಗಿಕತೆಗೆ ಸಮಾಜ ಅನುಮತಿ ನೀಡಿಲ್ಲ ಎಂಬುದು ಇಲ್ಲಿ ಸಾಬೀತಾಯಿತಲ್ಲವೆ?
ಲೈಂಗಿಕ ಕ್ರಿಯೆಯು ಯಾವಾಗ ಎಲ್ಲಿ ಹೇಗೆ ಬೇಕಾದರೂ ಜರುಗಲಿ ಅಥವಾ ಜರುಗದಿರಲಿ. ಅದು ವಿವಾಹವಾಗುವುದಕ್ಕೆ ಒಂದು ಪರವಾನಗಿ ಆಗುವುದಿಲ್ಲ. ಹಾಗೆ ವಿವಾಹಪೂರ್ವದಲ್ಲಿ ಪರಸ್ಪರ ಒಪ್ಪಿ ಆಗುವ ಲೈಂಗಿಕ ಕ್ರಿಯೆಯೂ, ಅದಕ್ಕೆ ದೃಢವಾದ ಆಧಾರ ಇದ್ದರೂ ಕೂಡಾ, ಅದು ವಿವಾಹವಾಗುವುದಕ್ಕೆ ಕಾರಣವಲ್ಲ. ಕಾರಣ ಆಗಬಾರದು.
ಲೈಂಗಿಕ ಪ್ರಕ್ರಿಯೆಯು ಭಾರತೀಯ ಸಂಸ್ಕೃತಿಯಲ್ಲಿ ವಿವಾಹೋತ್ತರ ಕ್ರಿಯೆ. ಅದರ ಹೊರತಾಗಿ ಜರುಗುವುದು, ಧರ್ಮ ವಿರೋಧ ಮಾತ್ರವಲ್ಲ, ಕಾನೂನು ವಿರೋಧ. ಅಂಥದ್ದು ಜರುಗುತ್ತದೆ ಎಂದ ಮಾತ್ರಕ್ಕೆ ಅದು ಕದ್ದು ಮುಚ್ಚಿಯೇ ಹೊರತು, ಸಮಾಜ ಒಪ್ಪಿಗೆ ನೀಡಿ ಅಲ್ಲ. ಸಮಾಜ  ಅಸಹಾಯಕವಾಗಿಲ್ಲ. ಅದು ತನ್ನ ಬಲ ಕಡಿಮೆಯಾಗುವ ಸೂಚನೆ ಸಿಕ್ಕಾಗ, ಎಲ್ಲವನ್ನೂ ಸರಿದಾರಿಗೆ ತರುತ್ತದೆ, ತರುತ್ತಲೇ ಇದೆ.
'ವಿವಾಹ ನಿಶ್ಚಯವಾಗುವುದು ಸ್ವರ್ಗದಲ್ಲಿ' ಎಂದು ಹಿಂದೂ ಸಂಪ್ರದಾಯ ಹೇಳುತ್ತಾ ಬಂದಿದೆ. ವಿವಾಹವು ಪವಿತ್ರ ಬಂಧನ. ಅದು ಜೀವನಪೂರ್ತಿ ಒಬ್ಬರನ್ನೊಬ್ಬರು ಬಿಟ್ಟಿರಲಾಗದ, ಬಿಡಬಾರದ, ಅನುಬಂಧವಾಗುವುದಕ್ಕಾಗಿ ಅದನ್ನು ಸ್ವರ್ಗದಲ್ಲಿ ನಿಶ್ಚಯಿಸಲಾಗಿದೆ ಅಂದಿದ್ದಾರೆ. ಜೀವಸೃಷ್ಟಿಯಲ್ಲಿ ಗಂಡು, ಹೆಣ್ಣು ಬೇರೆ ಬೇರೆ ಜೀವಗಳಲ್ಲ. ಸೃಷ್ಟಿಯ ಅಡಿಯಲ್ಲಿ ಅದು ಏಕಕೋಶ ಜೀವಿ. ಕಾಲಾಂತರದಲ್ಲಿ ಗಂಡು- ಹೆಣ್ಣಾಗಿ ಒಡೆದಿವೆ. ಅದನ್ನು ಮತ್ತೆ ಒಂದಾಗಿಸುವ ಕ್ರಿಯೆಯೇ ವಿವಾಹ. ಇಬ್ಬರೂ ಕೂಡಿದಾಗ ಒಂದು ಅಂಗವಾಗುತ್ತಾರೆ. ಮತ್ತೆ ಸೃಷ್ಟಿಸಲಿಕ್ಕಾಗಿ ಲೈಂಗಿಕ ಕ್ರಿಯೆ ಇದೆ. 'ಪ್ರಜಾ ಸಂಪತ್ ಸಿದ್ಧಿಯರ್ಥಂ'. ವಿವಾಹ ಇರುವುದು ರತಿ ಕ್ರೀಡೆಗಲ್ಲ. ಒಳ್ಳೆಯ ಪ್ರಜೆಗಳನ್ನು ಸೃಷ್ಟಿಸಲು ಒಳ್ಳೆಯ ದಾಂಪತ್ಯ ಅವಶ್ಯಕ. ವಿವಾಹಪೂರ್ವ ಲೈಂಗಿಕ ಕ್ರಿಯೆಯಿಂದಲೂ ಪ್ರಜೆಗಳ ಸೃಷ್ಟಿಯಾಗಬಹುದು. ಅದು ಸಭ್ಯತೆ,ಸಂಪ್ರದಾಯಗಳನ್ನು ಮೀರಿದ್ದಾದ್ದರಿಂದ, ಅಲ್ಲಿಯ ಸೃಷ್ಟಿಯ ಜೀವಿ ಸಭ್ಯನಾಗರಿಗಲಾರದು ಎಂಬುದಕ್ಕಾಗಿ ವಿವಾಹದ ಬಳಿಕ ಲೈಂಗಿಕ ಕ್ರಿಯೆಗೆ ಅವಕಾಶವನ್ನಿತ್ತಿದೆ.
ಆದ್ದರಿಂದ ಯಾವುದೇ ವಿವಾಹರಹಿತ ಸಂಬಂಧಗಳು ಭಾರತೀಯ ಸಂಪ್ರದಾಯವನ್ನು ಮೀರಿ ನಡೆಯುವಂಥದ್ದು. ಇದಕ್ಕೆ ಧರ್ಮದ ಸಮ್ಮತಿ ಇಲ್ಲ. ಕಾನೂನು  ಸಮ್ಮತಿ ಇತ್ತರೆ ಅದು ಧರ್ಮದ ವಿರುದ್ಧವಾಯಿತು. ಕಾನೂನು ಯಾವತ್ತೂ ಧರ್ಮಕ್ಕೆ ಪೂರಕವಾಗಿರಬೇಕು. <
ಟಕೃಷ್ಣರಾಜ ಕೆದಿಲಾಯ, ಪುತ್ತೂರು


'ಜಗುಲಿ'ಯಲ್ಲಿ ಈ ವಾರದ ವಿಷಯ 'ವಿವಾಹಪೂರ್ವ ಲೈಂಗಿಕತೆ'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.