ಬೈಟುಕಾಫಿ

ಪರಿಸ್ಥಿತಿಗೆ ಎದುರಾಗಿ ಈಜಿದವರು!

Published On :

ಸ್ವಾಮಿ ವಿವೇಕಾನಂದರು ರಾಮಕೃಷ್ಣರ ತತ್ವ ಸಿದ್ಧಾಂತಗಳನ್ನು ಪ್ರಮಾಣಿಸಿ ಸ್ವೀಕರಿಸಿದ್ದಾರೆ. ರಾಮಕೃಷ್ಣರು ಅತ್ಯುನ್ನತ ಆಧ್ಯಾತ್ಮಿಕ ಶಿಖರ ಎಂಬುದನ್ನು ಸ್ಪಷ್ಟವಾಗಿ ಮನಗಂಡಿದ್ದರು. ಸ್ವಾಮೀಜಿ ಭೇಟಿ ಮಾಡಿದ ಐರೋಪ್ಯ ಅಧಿಕಾರಿಗಳಲ್ಲಿ ಒಬ್ಬರಾದ ಪೆನ್ನಿಂಗ್‌ಟನ್ ಎಂಬುವವರು ಹಿಂದೂ ಧರ್ಮದ ಯೋಗದ ಬಗ್ಗೆ ಕೇಳಿದ್ದರು. ಆಗ ಸ್ವಾಮೀಜಿ ಯೋಗದ ಸೂಕ್ಷ್ಮಗಳನ್ನೆಲ್ಲ ಆಧುನಿಕ ಮನಶಾಸ್ತ್ರದ ಬೆಳಕಿನಲ್ಲಿ ವಿವರಿಸಿದ್ದರು. ಇದರಿಂದ ಪೆನ್ನಿಂಗ್‌ಟನ್ ಪ್ರಭಾವಿತರಾಗಿ, ಇಂಗ್ಲೆಂಡಿಗೆ ಹೋಗಿ ಈ ಸಂದೇಶಗಳನ್ನು ಪ್ರಚಾರ ಮಾಡಿ. ಅಲ್ಲಿ ಖಂಡಿತವಾಗಿಯೂ ಮನ್ನಣೆ ದೊರಕುತ್ತದೆ ಎಂದು ಸಲಹೆ ನೀಡಿದ್ದರು. ಹೀಗೆ ಸೂಚಿಸಿದವರಲ್ಲಿ ಇವರೇ ಮೊದಲಿಗರು.
ಸ್ವಾಮೀಜಿ ಮನಸ್ಸಿನಲ್ಲಿ ರಾಮಕೃಷ್ಣರ ಹೆಸರನ್ನು ಶಾಶ್ವತಗೊಳಿಸುವಂತಹ ಒಂದು ಸ್ಮಾರಕವನ್ನು, ಗಂಗಾ ತೀರದಲ್ಲೊಂದು ದೇವಾಲಯವನ್ನು ನಿರ್ಮಿಸಬೇಕೆಂಬ ಆಕಾಂಕ್ಷೆ ತೀವ್ರವಾಗಿ ಕೊರೆಯುತ್ತಿತ್ತು. ಆದರೆ ಅದಕ್ಕೆ ಬೇಕಾಗುವಷ್ಟು ಧನಸಂಗ್ರಹದ ಬಗ್ಗೆ ದಿಕ್ಕುತೋಚದಾಗಿತ್ತು. ಏನೇ ಬರಲಿ ಈ ಸಂಘವನ್ನು ಸಂರಕ್ಷಿಸಿಯೇ ಸಿದ್ಧ ಎಂಬ ದೃಢಸಂಕಲ್ಪದೊಂದಿಗೆ ಪರಿವ್ರಾಜಕರಾಗಿ ಹೊರಟರು.
ಪ್ರತಿ ಸಲ ಹೊರಟಾಗಲೂ ಯಾವುದಾದರೊಂದು ಕಾರಣದಿಂದ ಹಿಂದಿರುಗಬೇಕಾಯಿತು. ಈ ಸಲ ಮಾತ್ರ ಸ್ವಾಮೀಜಿ ಮತ್ತೆ ಮಠಕ್ಕೆ ಹಿಂದಿರುಗಿದ್ದು ಸುದೀರ್ಘ ಏಳು ವರ್ಷಗಳ ನಂತರವೇ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ವಿಶ್ವಮಾನವನ ದಿವ್ಯ ಸಂದೇಶವನ್ನು ಸಾರಿ, ವಿಶ್ವವಿಜೇತರಾದ ಮೇಲೆಯೇ!
-ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.