ಬೈಟುಕಾಫಿ

ಕಾರ್ಯಸಾಧನೆಯ ಹೆಗಲ ಏರಿ...

Published On :

ಸ್ವಾಮಿ ವಿವೇಕಾನಂದರು ಹಿಮಾಲಯದಲ್ಲಿ ವಾಸವಾಗಿದ್ದು ಧ್ಯಾನಾನಂದದಲ್ಲಿ ಲೀನವಾಗಿರಬೇಕೆಂಬ ಬಹುಕಾಲದ ಹಂಬಲವನ್ನು ಕೊನೆಗೊಳಿಸಿ ಇವರ ಗುರುಭಾಯಿಗಳೊಡನೆ ಮೀರತ್‌ಗೆ ಬಂದರು. ಅಲ್ಲಿಯ ಸೇಠ್‌ಜಿ ಆಹ್ವಾನದ ಮೇರೆಗೆ ಆತನ ಉದ್ಯಾನಗೃಹದಲ್ಲಿ ಇಳಿದುಕೊಂಡರು. ಈಗ ಈ ಸೇಠ್‌ಜಿಯ ಉದ್ಯಾನಗೃಹವು ಮತ್ತೊಂದು ಬಾರಾನಗೋರ್ ಮಠವೇ ಆದಂತಾಯಿತು. ಇಲ್ಲೀಗ ವಿವೇಕಾನಂದರು, ಬ್ರಹ್ಮಾನಂದರು, ಶಾರದಾನಂದರು, ತುರೀಯಾನಂದರು, ಅಖಂಡಾನಂದರು, ಅದ್ವೈತಾನಂದರು ಹಾಗೂ ಕೃಪಾನಂದರೆಲ್ಲ ಒಟ್ಟಾಗಿ ಸೇರಿದ್ದರು. ಇವರೆಲ್ಲ ಸ್ವಾಮೀಜಿ ನೇತೃತ್ವದಲ್ಲಿ ಧ್ಯಾನ ಜಪ ಪ್ರಾರ್ಥನೆ ಭಜನೆಗಳೊಂದಿಗೆ ಸಂಸ್ಕೃತ-ಇಂಗ್ಲಿಷ್ ಸಾಹಿತ್ಯದ ಶ್ರೇಷ್ಠ ಗ್ರಂಥಗಳನ್ನು ಅಧ್ಯಯಿಸತೊಡಗಿದರು.
ಸ್ವಾಮೀಜಿ ಗ್ರಂಥಾಲಯವೊಂದರಿಂದ ಸರ್ ಜಾನ್ ಲುಬ್ಬಾಕ್‌ರ ಕೃತಿಗಳನ್ನು ತರಿಸಿಕೊಂಡು ಓದುತ್ತಿದ್ದರು. ಈ ಗ್ರಂಥಗಳು ಗಾತ್ರದಲ್ಲಿ, ವಿಷಯದಲ್ಲಿ ಬಹಳ ಹಿರಿದಾದವು. ಸ್ವಾಮೀಜಿ ಪ್ರತಿದಿನ ಒಂದೊಂದಾಗಿ ತರಿಸಿಕೊಂಡು ಮರುದಿನ ಹಿಂದಿರುಗಿಸುತ್ತಿದ್ದರು. ಇದನ್ನು ಗಮನಿಸಿದ ಗ್ರಂಥಾಲಯದ ಅಧಿಕಾರಿ, ಅಸಹನೆಯಿಂದ ವ್ಯಂಗ್ಯವಾಗಿ 'ಏನು, ನಿಮ್ಮ ಸ್ನೇಹಿತರು ಪುಸ್ತಕದ ಹೊಳೆಯುವ ಹೊರಕವಚವನ್ನಷ್ಟೇ ನೋಡಿ ಹಿಂದಿರುಗಿಸುವಂತೆ ಕಾಣುತ್ತದೆ' ಎಂದರು. ಇದನ್ನು ತಿಳಿದ ಸ್ವಾಮೀಜಿ ತಾನೇ ಬಂದು ಆ ಅಧಿಕಾರಿಯನ್ನು ಕಂಡು, 'ಸ್ವಾಮೀ, ನೀವು ಕಳಿಸಿದ ಪುಸ್ತಕಗಳನ್ನೆಲ್ಲ ನಾನು ಓದಿದ್ದೇನೆ. ಇದರ ಬಗ್ಗೆ ನಿಮಗೇನಾದರೂ ಸಂದೇಹವಿದ್ದರೆ ಪ್ರಶ್ನೆಗಳನ್ನು ಕೇಳಬಹುದು' ಎಂದರು. ಅಧಿಕಾರಿ ಹಲವು ಪ್ರಶ್ನೆಗಳನ್ನು ಕೇಳಿದ. ಪ್ರತಿಯೊಂದಕ್ಕೂ ಸಮರ್ಪಕವಾಗಿ ಉತ್ತರಿಸಿದ ಸ್ವಾಮೀಜಿ, ಪುಸ್ತಕದಲ್ಲಿನ ಕೆಲವು ಪ್ಯಾರಾಗಳನ್ನೇ ಉದ್ಧರಿಸುತ್ತಾ, ಆ ಭಾಗದ ಪುಟ ಸಂಖ್ಯೆಗಳನ್ನೂ ಹೇಳಿದಾಗ ಅಧಿಕಾರಿ ಬೆರಗಾಗಿ ನಿಂತ! ಆಮೇಲೆ ಸ್ವಾಮೀಜಿ ತನ್ನ ದುಡುಕು ಮಾತಿಗಾಗಿ ಕ್ಷಮೆ ಯಾಚಿಸಿದ.

-ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.